ಮಂಗಳೂರು, ಡಿ 16 (DaijiworldNews/HR): ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆ ಪ್ರಾರಂಭ ಮಾಡಿದ್ದು, ಭಯೋತ್ಪಾದನೆಗೆ ಮೂಲ ಪ್ರೇರಣೆಯೇ ಕಾಂಗ್ರೆಸ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಕುಕ್ಕರ್ ಬಾಂಬ್ ಸ್ಟೋಟದ ಮಹಮ್ಮದ್ ಶಾರೀಕ್ ಪರ ಡಿಕೆಶಿ ಬ್ಯಾಟಿಂಗ್ ವಿಚಾರದ ಕುರಿತು ಪ್ರತಿಕ್ರಿಯಿಸಿದ ನಳಿನ್ ಕುಮಾರ್ ಕಟೀಲ್, ಬಿಂದ್ರನೆವಾಲೆಯ ಭಯೋತ್ಪಾದನೆಗೆ ಇಂದಿರಾ ಗಾಂಧಿ ಪ್ರೇರಣೆ ನೀಡಿದ್ರು. ಕಾಶ್ಮೀರದಲ್ಲಿ ಆರಂಭವಾದ ಭಯೋತ್ಪಾದನೆ ಪ್ರತೀ ಊರಿಗೆ ತಲುಪೋಕೆ ಕಾಂಗ್ರೆಸ್ ಕಾರಣ. ಕಾಶ್ಮೀರದ ಬಾಂಬ್ ದೆಹಲಿ, ಕೊಯಮತ್ತೂರುನಲ್ಲಿ ಯುಪಿಎ ಕಾಲಘಟ್ಟದಲ್ಲಿ ಸ್ಫೋಟವಾಯಿತು. ಮುಂಬೈ ದಾಳಿ ರೂವಾರಿ ಕಸಬ್ ಗೆ ಕಾಂಗ್ರೆಸ್ ಸರ್ಕಾರ ಬಿರಿಯಾನಿ ತಿನ್ನಿಸಿದ್ದು, ಉಗ್ರ ಕಸಬ್ ಗೆ ಅತಿಥಿ ಸತ್ಕಾರ ಮಾಡಿದ್ದು ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಇದೇ ಮಾನಸಿಕತೆಯನ್ನು ಹೊಂದಿದವರು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್. ಮಂಗಳೂರು ಬಾಂಬ್ ಪ್ರಕರಣವನ್ನಯ ಭಯೋತ್ಪಾದನಾ ಅಲ್ಲ ಅಂತಾ ಡಿಕೆಶಿ ಬಿಂಬಿಸುತ್ತಿದ್ದಾರೆ. ಶಾರೀಕ್ ಹಿನ್ನಲೆ, ದುರಂತ, ಪೊಲೀಸರ ತನಿಖೆ ಆಧಾರದಲ್ಲಿ ಭಯೋತ್ಪಾದನಾ ಕೃತ್ಯ ಅಂತಾ ಪೊಲೀಸರೇ ಹೇಳಿದ್ದಾರೆ. ಕಾಂಗ್ರೆಸ್ ಭಯೋತ್ಪಾದಕತೆಯ ಪರವಾಗಿದೆ. ಯಾವ ಸ್ವಾತಂತ್ರ ಕ್ಕಾಗಿ ಕೆಲಸ ಮಾಡಿದ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಈಗ ದೇಶ ವಿರೋಧಿ ಕೆಲಸ ಮಾಡುತ್ತಿದೆ ಎಂದರು.
ಕಾಶ್ಮೀರದ ಕಾಂಗ್ರೆಸ್ ನಾಯಕ ಭಯೋತ್ಪಾದರಿಗೆ ಒಂದು ಕೋಟಿ ಆಫರ್ ನೀಡಿದ್ದಾನೆ. ಪಿಎಫ್ಐ ಕ್ರಿಮಿನಲ್ ಗಳ ಕೇಸ್ ಹಿಂದೆಗೆದು ಕಾಂಗ್ರೆಸ್ ಬಿ ರಿಪೋರ್ಟ್ ಹಾಕಿದೆ. ಶಾರೀಕ್ ಈ ಹಿಂದೆ ಗೋಡೆ ಬರಹ ಬರೆದಾಗ ಅವನ ಪರವಾಗಿ ಕಾಂಗ್ರೆಸ್ ಹೇಳಿಕೆ ನೀಡಿದೆ. ಕಾಂಗ್ರೆಸ್ ನದ್ದು ಭಯೋತ್ಪಾದನೆಯ ಮಾನಸಿಕತೆಯಾಗಿದೆ. ಮುಂದಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಯೋತ್ಪಾದನೆಗೆ ಪ್ರೇರಣೆ ನೀಡಲಿದೆ ಎಂದಿದ್ದಾರೆ.
ಇನ್ನು ಕಾಂಗ್ರೆಸ್ಗೆ ಪೊಲೀಸ್ ಇಲಾಖೆಯ ಬಗ್ಗೆ ಗೌರವ ಇಲ್ಲ, ಭಯೋತ್ಪಾದಕರ ಮೇಲೆ ಪ್ರೀತಿ ಇದೆ. ವೋಟರ್ ಡಿ ಹಗರಣ ಮುಚ್ಚುವ ಕೆಲಸ ಈ ಹಿಂದೆ ಕಾಂಗ್ರೆಸ್ ಮಾಡಿದೆ. ಬಿಜೆಪಿಗೆ ಪ್ರಕರಣ ಮುಚ್ಚುವ ಅಗತ್ಯತೆ ಇಲ್ಲ. ಕಾಂಗ್ರೆಸ್ ಕಾಲಘಟ್ಟದ ಹಗರಣದ ಪಿಎಸ್ಐ ಅಕ್ರಮ ನೇಮಕಾತಿಯ ಕುಳಗಳ ಬಂಧನವಾಗಿದೆ ಎಂದರು.
ಶಿಕ್ಷಕರ ನೇಮಕಾತಿ ಹಗರಣದ ತನಿಖೆ ನಡೆಯುತ್ತಿದೆ. ಇಂತಹ ಯಾವ ಕೆಲಸವನ್ನೂ ಬಿಜೆಪಿ ಮಾಡೋದಿಲ್ಲ. ವೋಟ್ ಬ್ಯಾಂಕ್ ಗೆ ಚಿಲ್ಲರೆ ರಾಜಕೀಯ ಮಾಡೋದು ಕಾಂಗ್ರೆಸ್ ಕೆಲಸ. ಡಿಜೆಹಳ್ಳಿ ಕೆಜೆ ಹಳ್ಳಿ ಗಲಭೆಯ ಹಿಂದ ಕಾಂಗ್ರೆಸ್ ಮೇಯರ್ ಇದ್ದಿದ್ದು ತನಿಖೆಯಲ್ಲಿ ಗೊತ್ತಾಗಿದೆ. ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆ ಜೊತೆ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿದೆ. ಕಾಂಗ್ರೆಸ್ ಭಯೋತ್ಪಾದನೆಗೆ ಪ್ರೇರಣಾ ಕೇಂದ್ರವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.