ಮಂಗಳೂರು, ಡಿ 16( DaijiworldNews/MS): ಖ್ಯಾತ ನ್ಯಾಯವಾದಿ ಫಾರೂಕ್ (49) ಅವರು ಹೃದಯಾಘಾತದಿಂದ ಇಂದು ಮೃತಪಟ್ಟಿದ್ದಾರೆ. ಇವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅವರ ಕಿರಿಯ ಸಹೋದರರಾಗಿದ್ದಾರೆ.
ಅವರ ಮೂಲ ಮೂಡುಬಿದಿರೆ, ಬೆಳುವಾಯಿಯವರಾಗಿದ್ದು. ಸ್ವಲ್ಪ ಸಮಯ ಮಂಗಳೂರು ಪಾಂಡೇಶ್ವರದಲ್ಲಿ ವಾಸವಾಗಿದ್ದರು. ಈಗ ಹೈಕೋರ್ಟ್ ವಕೀಲರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದರು. .ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದು, ಮೃತದೇಹ ಬೆಳುವಾಯಿಗೆ ತರಲಾಗುತ್ತದೆ. ಮೃತರು ಪತ್ನಿ ಪುತ್ರನನ್ನು ಅಗಲಿದ್ದಾರೆ.
ದೇಶ ಬಹುಕಾಲದಿಂದ ಕಾತರದಿಂದ ನೋಡುತ್ತಿದ್ದ ಅಯೋಧ್ಯೆ ಜಮೀನು ವಿವಾದದ ತೀರ್ಪು ಪ್ರಕಟಿಸಿದ್ದ ಪಂಚ ಪೀಠದ ಐವರು ನ್ಯಾಯಮೂರ್ತಿಗಳಲ್ಲಿ, ಫಾರೂಕ್ ಸಹೋದರ ಎಸ್. ಅಬ್ದುಲ್ ನಜೀರ್ ಕೂಡಾ ಒಬ್ಬರಾಗಿದ್ದರು.