ಬಂಟ್ವಾಳ, ಡಿ 15 (DaijiworldNews/SM): ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾನೆಂದು ಆರೋಪಿಸಿ ಪ್ರಯಾಣಿಕನೋರ್ವನ ಮೇಲೆ ಮೂವರ ತಂಡವೊಂದು ಹಲ್ಲೆನಡೆಸಿದ ಘಟನೆ ಬುಧವಾರ ಬೆಳಿಗ್ಗೆ ರಾಯಿಯಲ್ಲಿ ನಡೆದಿದ್ದು, ಈ ಕುರಿತು ಗುರುವಾರ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಬಿಮೂಡ ಗ್ರಾಮದ ತಲಪಾಡಿ ನಿವಾಸಿ ಇಸಾಕ್ ಎಂಬವರು ಪೊಲೀಸರಿಗೆ ದೂರುನೀಡಿದ್ದಾರೆ. ತಾನು ಮೇಸ್ತ್ರಿ ಕೆಲಸ ಮಾಡುತ್ತಿದ್ದು, ಮೂಡಬಿದ್ರೆ ಗಂಟಲ್ ಕಟ್ಟೆಯಲ್ಲಿ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದು ಬೆಳಿಗ್ಗೆ ಬಿ.ಸಿ.ರೋಡಿನಿಂದ ಮಹಾಗಣೇಶ್ ಬಸ್ಸಿನಲ್ಲಿ ಮೂಡಬಿದ್ರೆಗೆ ಪ್ರಯಾಣಿಸುತ್ತಿದ್ದು 2 ದಿನಗಳ ಹಿಂದೆ ಬೆಳಿಗ್ಗೆ ಬಿ.ಸಿ.ರೋಡಿನಿಂದ ಮೂಡಬಿದ್ರೆಗೆ ಹೋಗುತ್ತಿದ್ದ ಸಮಯ ಬಸ್ಸಿನಲ್ಲಿ ಪ್ರಯಾಣಿಕರು ಇದ್ದುದರಿಂದ ಶಾಲಾ ವಿದ್ಯಾರ್ಥಿನಿಯೊಬ್ಬಳು ನೀಡಿದ ಅವಳ ಬ್ಯಾಗನ್ನು ಹಿಡಿದುಕೊಂಡಿದ್ದೆ.
ಅಂತೆಯೇ ಬುಧವಾರವೂ ಗಂಟಲ್ ಕಟ್ಟೆಗೆ ಹೋಗಲು ಬಿ.ಸಿ.ರೋಡಿನಿಂದ ಬೆಳಿಗ್ಗೆ 7:25 ಗಂಟೆಗೆ ಮಹಾ ಗಣೇಶ್ ಬಸ್ಸಿನಲ್ಲಿ ಹೋಗುತ್ತಾ ಬಸ್ಸು ಬೆಳಿಗ್ಗೆ 8:10 ಗಂಟೆಗೆ ಕುದ್ಕೋಳಿ ಎಂಬಲ್ಲಿಗೆ ತಲುಪುತ್ತಿದ್ದಂತೆ ಬಸ್ಸಿನಲ್ಲಿ ಕುಳಿತುಕೊಂಡಿದ್ದ ಒಬ್ಬಾತನು ತಾನು ಕುಳಿತಿದ್ದಲ್ಲಿಗೆ ಬಂದು ರಂಡೆ ಮಗ, ನೀನು ಬಸ್ಸಿನಿಂದ ಇಳಿ ಬಸ್ಸಿನಲ್ಲಿ ಪ್ರಯಾಣಿಸುವ ಹುಡಗಿಯರಿಗೆ ತೊಂದರೆ ಕೊಡುತ್ತೀಯಾ ಎಂದು ಹಿಡಿದು ಬಸ್ಸಿನಿಂದ ಹೊರಗೆ ಕಳುಹಿಸಲು ಪ್ರಯತ್ನಿಸಿದ್ದಾನೆ,ಆಗ ಬಸ್ಸು ನಿಂತಾಗ ಇಬ್ಬರು ಬಸ್ಸಿಗೆ ಹತ್ತಿ ಬಸ್ಸಿನಿಂದ ಆ ಮೂವರು ಸೇರಿ ಪಿರ್ಯಾದಿದಾರರಿಗೆ “ ಬೇವರ್ಸಿ ರಂಡೆ ಮಗ ಹುಡುಗಿಯರಿಗೆ ಬಾರಿ ತೊಂದರೆ ಕೊಡುತ್ತೀಯಾ” ಎಂದು ಹಲ್ಲೆ ನಡೆಸಿ ರಿಕ್ಷಾ ಪಾರ್ಕಿನಿಂದ ಬಂದ ರಿಕ್ಷಾದಲ್ಲಿ ಕುಳ್ಳಿರಿಸಿ ರಾಯಿ ಎಂಬಲ್ಲಿಗೆ ಕರೆದುಕೊಂಡು ಹೋಗಿ ರಸ್ತೆ ಬದಿಯಲ್ಲಿ ಒಂದು ಗೋಳಿ ಮರದ ಕೆಳಗೆ ರಿಕ್ಷಾವನ್ನು ನಿಲ್ಲಿಸಿ ಕಾಡು ಮರದ ದೊಣ್ಣೆಯನ್ನು ತೆಗೆದು ಮೂವರು ಸೇರಿ ಬೆನ್ನಿಗೆ, ಎಡಕೈಗೆ, ಭುಜಕ್ಕೆ , ಎರೂ ಕಾಲಿನ ತೊಡೆಗೆ, ಹೊಟ್ಟೆಗೆ ಹೊಡೆದು, ಬೇವಾರ್ಸಿ ರಂಡೆ ಮಗ ನೀನು ಹುಡುಗಿಯರಿಗೆ ತೊಂದರೆ ಕೊಡುತ್ತೀಯಾ ಇನ್ನು ಮುಂದೆ ಈ ಬಸ್ಸಿನಲ್ಲಿ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ. ಒಬ್ಬಾತನು ಕಣ್ಣಿಗೆ ಗುದ್ದಿ ಬೈದಿದ್ದು ಜನರು ಸೇರುವುದನ್ನು ಕಂಡು ಓಡಿ ಹೋಗಿರುತ್ತಾರೆ.
ಔಷಧಿ ಪಡೆದು ಮನೆಗೆ ಬಂದಿದ್ದು ರಾತ್ರಿ ನೋವು ಜಾಸ್ತಿಯಾದುದರಿಂದ ಈ ದಿನ ಬೆಳಿಗ್ಗೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಾಗಿದ್ದೇನೆ ಎಂದು ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.