ಮೂಡುಬಿದಿರೆ, ಮಾ 05(SM): ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಅಂಚೆಕಚೇರಿಯ ನಿವೃತ್ತ ಅಂಚೆ ಮಾಸ್ತರ್ ಮೃತಪಟಿದ್ದಾರೆ. ಪಡುಕೊಣಾಜೆ ಶಾಖಾ ಅಂಚೆಕಚೇರಿಯ ನಿವೃತ್ತ ಅಂಚೆ ಮಾಸ್ತರ್, ಪಡುಕೊಣಾಜೆಯ ‘ಆಶ್ರಯ’ ನಿವಾಸಿ ಅಜಿತ್ ಕುಮಾರ್ ಆಳ್ವ(56) ಮೃತಪಟ್ಟವರು.
ಕಳೆದ ನವೆಂಬರ್ನಲ್ಲಿ ಕಾರ್ಕಳ ಸಮೀಪದ ಮೂರೂರುನಲ್ಲಿ ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದರು. ಕಾರ್ಯಕ್ರಮ ನಿಮಿತ್ತ ತೀರ್ಥಹಳ್ಳಿಗೆ ತೆರಳಿದ್ದ ಅಜಿತ್ ಅವರು ತನ್ನ ಸಂಬಂಧಿಕರ ಕಾರಿನಲ್ಲಿ ಊರಿಗೆ ವಾಪಾಸಾಗುತ್ತಿದ್ದಾಗ ಮೂರೂರಿನಲ್ಲಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಇವರಿಗೆ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲ ಸಮಯ ಚಿಕಿತ್ಸೆ ಪಡೆದು ನಂತರ ಮನೆಗೆ ತೆರಳಿದ್ದರು.
ನಾಲ್ಕು ವರ್ಷಗಳ ಹಿಂದೆ ಅಂಚೆ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದ ಬಳಿಕ ಅವರು ಮೂಡುಬಿದಿರೆ ಕೋರ್ಟ್ ಆವರಣದಲ್ಲಿ ಕ್ಯಾಂಟೀನ್ ನಡೆಸುತ್ತಿದ್ದರು.