ಸುಳ್ಯ, ಡಿ.13 (DaijiworldNews/HR): ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದಲ್ಲಿ ಅಕ್ರಮವಾಗಿ ಕೆಂಪು ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಸ್ಥಳಗಳಿಗೆ ದೂರಿನ ಮೇರೆಗೆ ಲೋಕಾಯುಕ್ತ ದಾಳಿಯಾಗಿದ್ದು, ಮುಂದುವರಿದ ಭಾಗವಾಗಿ ಇಂದು ಬೆಳ್ಳಂಬೆಳಗ್ಗೆ ಮಂಡೆಕೋಲು ಗಡಿಯನ್ನು ದಾಟಿ ಕೆಂಪು ಕಲ್ಲು ತುಂಬಿಕೊಂಡು ಸಾಗಾಟ ಮಾಡುವ ಮಾಹಿತಿಯು ಕಂದಾಯ ಇಲಾಖೆ ಅಧಿಕಾರಿ ಶರತ್ ರವರ ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಯು ಲಾರಿಯನ್ನು ತಡೆದು ಅಂತರಾಜ್ಯದಿಂದ ಸಾಗಾಟ ಮಾಡುತ್ತಿರುವ ಲಾರಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
ಸುಳ್ಯ ತಾಲೂಕಿನ ನಾನಾ ಕಡೆಗಳಲ್ಲಿ ಮರಳು ಮತ್ತು ಕೆಂಪುಕಲ್ಲು ಗಣಿಗಾರಿಕೆಗಳು ನಡೆಯುತ್ತಿದ್ದು ಇದರ ವಿರುದ್ದ ಲೋಕಾಯುಕ್ತ ಸಮರ ಸಾರಿದ್ದು ಇದರ ಬೆನ್ನಲ್ಲೆ ಕಂದಾಯ ಇಲಾಖೆ ಎಚ್ಚೆತ್ತುಕೊಂಡು ನಿರಂತರ ದಾಳಿಗಳನ್ನು ಮಾಡುತ್ತಿದ್ದು ಅಕ್ರಮಗಳನ್ನು ತಡೆಯುವಲ್ಲಿ ಮುಂದಿನ ದಿನಗಳಲ್ಲಿ ಸಫಲರಾಗುವರೇ ಎಂದು ಕಾದು ನೋಡ ಬೇಕಿದೆ.