ಮಂಗಳೂರು, ಡಿ 13 ( DaijiworldNews/MS): ಆರೋಗ್ಯ ಕ್ಷೇತ್ರವನ್ನು ತಳಮಟ್ಟದಿಂದ ಬಲಪಡಿಸುವ ಮತ್ತು ಸುಧಾರಣೆ ತರುವ ದೃಷ್ಟಿಯಿಂದ ಸ್ಥಳೀಯ ಸಂಸ್ಥೆಗಳ ಮೂಲಕ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಜೊತೆಯಲ್ಲಿ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ನೀಡಲು ಇದೇ ಡಿ. 14ರ ಬೆಳಿಗ್ಗೆ 11 ಗಂಟೆಗೆ ರಾಜ್ಯಾದ್ಯಂತ ವರ್ಚುವೆಲ್ ಮಾಧ್ಯಮದ ಮೂಲಕ 100 ನಮ್ಮ ಕ್ಲಿನಿಕ್ ಕೇಂದ್ರಗಳನ್ನು ಮುಖ್ಯಮಂತ್ರಿಗಳು ಲೋಕಾರ್ಪಣೆ ಮಾಡುವರು.
ಜಿಲ್ಲೆಯಲ್ಲಿ 10 ನಮ್ಮ ಕ್ಲಿನಿಕ್ ಗಳು ಚಾಲನೆಗೊಳ್ಳಲಿದ್ದು, ಸೂಟರ್ ಪೇಟೆ, ಬೋಳಾರ, ಬಂದರು, ಪಚ್ಚನಾಡಿ, ಕೋಡಿಕಲ್, ಮೀನಕಳಿಯ, ಕೆರೆ ಬೈಲು, ಗಂಟಲ್ ಕಟ್ಟೆ, ದುಗ್ಗಲಡ್ಕ ಹಾಗೂ ಕಡಬದಲ್ಲಿ ಅವು ಚಾಲನೆಗೊಳ್ಳಲಿವೆ.
ಜಿಲ್ಲೆಯ ಪ್ರಮುಖ ಕೇಂದ್ರಗಳಲ್ಲಿ ಸಚಿವರು, ಶಾಸಕರು ಹಾಗೂ ಜನಪ್ರತಿನಿಧಿಗಳು ಚಾಲನೆ ನೀಡುವರು.
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾದ ವೇದವಾಸ್ ಕಾಮತ್ ಅವರು ಸೂಟರ್ ಪೇಟೆಯಲ್ಲಿ, ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಭರತ್ ಶೆಟ್ಟಿ ಅವರು ಪಚ್ಚನಾಡಿಯಲ್ಲಿ, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು. ಟಿ. ಖಾದರ್ ಅವರು ಉಲ್ಲಾಳದ ಕೆರೆಬೈಲ್, ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಉಮಾನಾಥ್ ಕೋಟ್ಯಾನ್ ಅವರು ಗಂಟಲ್ ಕಟ್ಟೆಯಲ್ಲಿ, ಸುಳ್ಯ ತಾಲೂಕಿನಲ್ಲಿ ಸಚಿವರಾದ ಎಸ್. ಅಂಗಾರ ಅವರು ದುಗ್ಗಲಡ್ಕ ಹಾಗೂ ಕಡಬದಲ್ಲಿ ನಮ್ಮ ಕ್ಲಿನಿಕ್ ಅನ್ನು ಲೋಕಾರ್ಪಣೆ ಮಾಡುವವರು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.