ಪಡುಬಿದ್ರಿ, ಡಿ12 ( DaijiworldNews/MS): ಮೀನುಗಾರಿಕೆಗೆ ತೆರಳಿದ್ದ ದೋಣಿ ಉಚ್ಚಿಲ ಸಮೀಪದ ಸಮುದ್ರದಲ್ಲಿ ಮುಳುಗಡೆಯಾಗಿದ್ದು ಏಳು ಮಂದಿ ಮೀನುಗಾರರನ್ನುರಕ್ಷಣೆ ಮಾಡಿರುವ ಘಟನೆ ಸೋಮವಾರ ನಡೆದಿದೆ.
ಉಚ್ಚಿಲದ ನಿವಾಸಿ ವಿಮಲಾ ಸಿ. ಪುತ್ರನ್ ಮಾಲೀಕತ್ವದ "ಶ್ರೀ ಗಿರಿಜಾ" ದೋಣಿ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ ವೇಳೆ ಹವಾಮಾನ ವೈಪರೀತ್ಯದಿಂದ ದೈತ್ಯ ಅಲೆಗಳ ಅಬ್ಬರಕ್ಕೆ ಸಿಲುಕಿ ದೋಣಿ ಸಿಲುಕಿ ಮುಳುಗಡೆಯಾಗಿದೆ. ಸಮೀಪದಲ್ಲಿದ್ದ ಮೀನುಗಾರರು ನೆರವಿಗೆ ಧಾವಿಸಿ ಅಪಾಯದಲ್ಲಿದ್ದ ಮೀನುಗಾರರನ್ನು ರಕ್ಷಿಸಿದ್ದಾರೆ.
ಬೋಟ್ನಲ್ಲಿದ್ದ ಬಲೆ ಹಾಗೂ ಹೈ ಸ್ಪೀಡ್ ಎಂಜಿನ್ ಸಮುದ್ರ ಪಾಲಾಗಿದ್ದು 6.5 ಲಕ್ಷ ನಷ್ಟ ಸಂಭವಿಸಿದ್ದು ಪಡುಬಿದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಾಪು ಶಾಸಕ ಲಾಲಾಜಿ ಮೆಂಡನ್ ಮೀನುಗಾರರನ್ನು ಭೇಟಿ ನೀಡಿ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.