ಮಂಗಳೂರು ನ 1: ಶಾಸಕ ಜೆ ಆರ್ ಲೋಬೋ ಅವರ ತಾಯಿ ಸಿಸಿಲಿಯಾ ಲೋಬೋ ನವೆಂಬರ್ 1 ಬುಧವಾರ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರ್ತೆಯಲ್ಲಿ ನಿಧನರಾದರು. ಅವರಿಗೆ 96 ವರ್ಷ ವಯಸ್ಸಾಗಿತ್ತು. ಸುಮಾರು 40 ವರ್ಷಗಳ ಕಾಲ ಶಿಕ್ಷಕಿಯಾಗಿ ದುಡಿದಿರುವ ಅವರು ಪುತ್ತೂರು, ಕೈಕಂಬ, ವಿಟ್ಲ, ಪಜೀರು ಸೇರ್ಇದಂತೆ ಹಲವೆಡೆ ಕಾರ್ಯ ನಿರ್ವಹಿಸಿದ್ದರು. ಜೊತೆಗೆ ಹಲವಾರು ಸಾಮಾಜಿಕ ಸೇವೆಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಮೃತರ ಅಂತಿಮ ಸಂಸ್ಕಾರ ಕೈಕಂಬದ ಲೇಡಿ ಆಫ್ ಪಾಂಪೈ ಚರ್ಚ್ ನಲ್ಲಿ ನಡೆಯಲಿದೆ.