ಮಂಗಳೂರು,ಮಾ.04(AZM):ಮನೆಗೆ ನುಗ್ಗಿದ್ದ ಕಳ್ಳರು ಸುಮಾರು 2 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳನ್ನು ದೋಚಿ ಪರಾರಿಯಾಗಿರುವ ಘಟನೆ ಮಂಗಳೂರಿನ ಮಾರ್ಗನ್ಸ್ ಗೇಟ್ ನಿವಾಸಿ ಗಿಲ್ಬರ್ಟ್ ಮಿನೇಜಸ್ ಎಂಬವರ ಮನೆಯಲ್ಲಿ ನಡೆದಿದೆ.
ಗಿಲ್ಬರ್ಟ್ ಅವರು 2018ರ 20ರಂದು ಬೆಳಗ್ಗೆ 9:30ಕ್ಕೆ ಮನೆಗೆ ಬೀಗ ಹಾಕಿ ಬೆಂಗಳೂರಿಗೆ ಹೋಗಿದ್ದರು.ಆದರೆ 2019ರ ಮಾ.3ರಂದು ಸಂಜೆ 5:30ರ ವೇಳೆ ಅವರು ತಮ್ಮ ಮನೆಗೆ ಹಿಂದಿರುಗಿದಾಗ ಮನೆಯ ಬಾಗಿಲಿಗೆ ಬೇರೆ ಬೀಗ ಹಾಕಿರುವುದು ಕಂಡುಬಂದಿದ್ದು, ಒಳಗೆ ಬಂದು ನೋಡಿದಾಗ ಕಳ್ಳತನ ಬೆಳಕಿಗೆ ಬಂದಿದೆ.
ಮನೆಯಲ್ಲಿದ್ದ ಗೊದ್ರೇಜ್ ಲಾಕ್, ಆಸ್ತಿಗೆ ಸಂಬಂಧಿಸಿದ ದಾಖಲಾತಿ, ಕೇಸ್ ಫೈಲ್ಸ್, ಸುಮಾರು 30 ಗ್ರಾಂ ತೂಕದ ಬ್ರಾಸ್ಲೈಟ್, ಸುಮಾರು 6 ಗ್ರಾಂ ತೂಕದ ಉಂಗುರ, ನಗದು 30 ಸಾವಿರ ರೂ., 35 ಸಾವಿರ ರೂ. ಮೌಲ್ಯದ ಬಟ್ಟೆ, ಎರಡು ಸೂಟ್ಕೇಸ್, ಶೂಗಳು, ಚಪ್ಪಲಿಗಳು, ಕೊಡೆಗಳು, ಅಡುಗೆಯ ಸಾಮಾನುಗಳು, ಶೌಚಾಲಯದ ಸೊತ್ತುಗಳು, ಹೃದ್ರೋಗಕ್ಕೆ ಸಂಬಂಧಿಸಿದ ಔಷಧಿಗಳು, ಬೆಡ್ಶೀಟ್, ಟವೆಲ್ಸ್, ಲುಂಗಿ ಮತ್ತು ಇತರ ಬಟ್ಟೆಗಳನ್ನು ಕಳವುಗೈಯಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.