ಮಂಗಳೂರು,ಮಾ 04(MSP): ವಿರೋಧ ಪಕ್ಷದಲ್ಲಿದ್ದುಕೊಂಡು 5 ವರ್ಷ ಹಾಗೂ ಆಡಳಿತ ಪಕ್ಷದಲ್ಲಿದ್ದುಕೊಂಡು 5 ವರ್ಷ ಹೀಗೆ ಕಳೆದ ಹತ್ತು ವರ್ಷದಲ್ಲಿ ಸಂಸದನಾಗಿ ಪ್ರಾಮಾಣಿಕವಾಗಿ ಮಾಡಿರುವ ಕೆಲಸ ತೃಪ್ತಿ ತಂದಿದೆ. ಯಾವುದೇ ರಾಜಕೀಯ ಮಾಡದೆ ಜಿಲ್ಲೆಗಾಗಿ ಸುಮಾರು 16,000 ಕೋಟಿ ರೂ ಅನುದಾನ ವಿವಿಧ ಯೋಜನೆಗಳ ಮೂಲಕ ನಮ್ಮ ಜಿಲ್ಲೆಗೆ ತಂದಿರುವ ಸಂತೃಪ್ತಿ ನನಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ನಗರದಲ್ಲಿ ಮಾ.4 ರ ಸೋಮವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಕ್ಷೇತ್ರದ ಅಭಿವೃದ್ದಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರಕ್ಕೆ, ಕೋಸ್ಟ್ ಗಾರ್ಡ್ ಟ್ರೈನಿಂಗ್ ಕೇಂದ್ರ, ಗುರುಪುರದಲ್ಲಿ ಪ್ಲಾಸ್ಟಿಕ್ ಪಾರ್ಕ್, ಕೇಂದ್ರೀಯ ವಿದ್ಯಾಲಯ ಸ್ಥಾಪನೆ, ಬಂಟ್ವಾಳದಲ್ಲಿ ತೆಂಗು ಪಾಕ್ ಆರಂಭಿಸಲು ಕೇಂದ್ರ ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು
ಇದಲ್ಲದೆ ಕೊಣಾಜೆಯಲ್ಲಿ ಐ.ಟಿ ಪಾರ್ಕ್, ವಿಶೇಷ ಕೃಷಿ ವಲಯವಾಗಿ ಪುತ್ತೂರು-ಸುಳ್ಯ-ಬೆಳ್ತಂಗಡಿ ತಾಲೂಕು ಹಾಗೂ ಮಂಗಳೂರು ರೈಲ್ವೇ ನಿಲ್ದಾಣವನ್ನು ಪಾಲ್ಘಾಟ್, ಮೈಸೂರು ವಿಭಾಗಕ್ಕೆ ಸೇರಿಸಿ ಪ್ರತ್ಯೆಕ ರೈಲ್ವೆ ವಲಯವನ್ನಾಗಿ ಮಾಡುವ ಪ್ರಸ್ತಾವನೆಯನ್ನು ಸರಕಾರಕ್ಕೆಅನುಮೋದನೆಗಾಗಿ ಕಳುಹಿಸಲಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.