ಬಂಟ್ವಾಳ,ಮಾ.03(AZM):ಅಪ್ರಾಪ್ತ ಬಾಲಕನಿಗೆ ಸೈಕಲ್ ರಿಪೇರಿ ಮಾಡುವವ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಬಂಟ್ವಾಳದ ಪಿಲಾತಬೆಟ್ಟು ಗ್ರಾಮದಲ್ಲಿ ಮಾ.02ರಂದು ನಡೆದಿದ್ದು, ಆರೋಪಿಯನ್ನು ಮಾ.03ರಂದು ಬಂಧಿಸಲಾಗಿದೆ.
ರಮಾನಂದ ಶೆಣೈ
ಬಂಟ್ವಾಳದ ಪಿಲಾತಬೆಟ್ಟು ಗ್ರಾಮದ ನಯನಾಡು ಎಂಬಲ್ಲಿ ಸೈಕಲ್ ರಿಪೇರಿ ಅಂಗಡಿಯಲ್ಲಿರುವ ರಮಾನಂದ ಶೆಣೈ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಯಾಗಿದ್ದಾನೆ. ನೊಂದ ಬಾಲಕ ತನ್ನ ಸೈಕಲ್ ರಿಪೇರಿ ಮಾಡಲೆಂದು ಆರೋಪಿಯ ಅಂಗಡಿಗೆ ಬಂದ ವೇಳೆ, ಆರೋಪಿಯು ಊಟ ಮಾಡಲೆಂದು ಬಾಲಕನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ.
ಈ ವೇಳೆ ಮನೆಯಲ್ಲಿ ಯಾರೂ ಇಲ್ಲದೆ ಇದ್ದು, ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಪ್ರಯತ್ನಿಸಿರುತ್ತಾನೆ. ಆದರೆ ಬಾಲಕ ತನ್ನ ಚಾಲಾಕುತನವನ್ನು ತೋರಿಸಿದ್ದು, ಆರೋಪಿಯ ಹೊಟ್ಟೆಗೆ ತನ್ನ ಕಾಲಿನಿಂದ ತುಳಿದ ಅಲ್ಲಿಂದ ಪಾರಾಗಿದ್ದಾನೆ. ಆದರೆ ಬಾಲಕನನ್ನು ಹಿಂಬಾಲಿಸಿಕೊಂಡು ಹೋದ ಆರೋಪಿ, ಈ ವಿಷಯ ಯಾರಿಗಾದರೂ ಹೇಳಿದರೆ ಸಾಯಿಸುವುದಾಗಿ ಬೆದಕೆಯೊಡ್ಡಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದ್ದು, ಮಾ.04ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.