ಉಪ್ಪಿನಂಗಡಿ,ಮಾ 03 (MSP): ಕಂಬಳ ಕ್ರೀಡೆಗಿದ್ದ ಹಲವು ಅಡೆತಡೆಗಳು ನಿವಾರಣೆಯಾಗಿದ್ದು, ಕಂಬಳವನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಒಂದು ವೇಳೆ ಮತ್ತೆ ಅಡೆತಡೆಗಳು ಬಂದರೆ ಹೊಸ ಕಾನೂನು ರಚಿಸಿಯಾದರೂ, ಕಂಬಳ ಕ್ರೀಡೆಯನ್ನು ಉಳಿಸುವ ಕೆಲಸ ಮಾಡುತ್ತೇವೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಹೇಳಿದ್ದಾರೆ.
ಅವರು ಅಶೋಕ್ ರೈ ಕೋಡಿಂಬಾಡಿ ಸಾರಥ್ಯದಲ್ಲಿ ಇಲ್ಲಿನ ಕೂಟೇಲು ಬಳಿಯ ನೇತ್ರಾವತಿ ನದಿ ಕಿನಾರೆಯಲ್ಲಿ ಮಾ.2 ರ ಶನಿವಾರ ಬೆಳಗ್ಗೆ ಆರಂಭವಾದ ವಿಜಯ ವಿಕ್ರಮ ಜೋಡುಕೆರೆ ಕಂಬಳದ ಸಭಾಕಾರ್ಯಕ್ರಮದಲ್ಲಿ ಸಂಜೆ ಭಾಗವಹಿಸಿ ಮಾತನಾಡಿದರು.
ಮಾಜಿ ಸಚಿವ ಜನಾರ್ಧನ ರೆಡ್ಡಿ ಮಾತನಾಡಿ ಕಂಬಳವೆನ್ನುವುದು ರೈತರ ಉತ್ಸವ. ರೈತರ ಜೀವನೋತ್ಸಾಹವನ್ನು ಹೆಚ್ಚಿಸುವ , ಕೃಷಿ ಪರಂಪರೆಯ ಈ ಕ್ರೀಡೆ ನಿಲ್ಲಬಾರದು ಎಂದು ಹೇಳಿದರು.
ಇದೇ ವೇಳೆ ಅಗಲಿದ ಕಂಬಳ ಕೋಣಗಳ ಯಜಮಾನರಾದ ವಿನು ವಿಶ್ವನಾಥ್ ಶೆಟ್ಟಿ ಕರಿಂಜೆ, ಪುರುಷೋತ್ತಮ ರಾಮ್ ಪೂಜಾರಿ, ಹಾಗೂ ಕೊಂಬೆಲು ಗುತ್ತು ಪ್ರಶಾಂತ್ ಪೂಜಾರಿಗೆ ನುಡಿನಮನ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ದ.ಕ ಜಿಲ್ಲಾ ಸಹಕಾರ ಬ್ಯಾಂಕ್ ನ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್ ಶೆಟ್ಟಿ, ಅಧ್ಯಕ್ಷ ಶಶಿಕುಮಾರ್ ಬಾರ್ಕೂರ್,ಎಸ್ ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಮುಂತಾದವರು ಉಪಸ್ಥಿತರಿದ್ದರು.
ಕಂಬಳ ಫಲಿತಾಂಶ : ಭಾಗವಹಿಸಿದ ಕೋಣಗಳ ಸಂಖ್ಯೆ 123 ಜೊತೆ
ಕನೆಹಲಗೆ:
ಬೇಲಾಡಿ ಬಾವ ಅಶೋಕ್ ಶೆಟ್ಟಿ
ಓಡಿಸಿದವರು: ನಾರಾವಿ ಯುವರಾಜ ಜೈನ್
(6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)
ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ
ಓಡಿಸಿದವರು: ಬೈಂದೂರು ಬಾಸ್ಕರ ದೇವಾಡಿಗ
(6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)
ಬಾರ್ಕೂರು ಶಾಂತಾರಾಮ ಶೆಟ್ಟಿ
ಓಡಿಸಿದವರು: ಮಂದಾರ್ತಿ ಶಿರೂರು ಮುದ್ದುಮನೆ ಗೋಪಾಲ ನಾಯ್ಕ
(6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)
ಹಗ್ಗ ಹಿರಿಯ:
ಪ್ರಥಮ: ಮಾಳ ಆನಂದ ನಿಲಯ ಶೇಖರ ಶೆಟ್ಟಿ
ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್.M.ಶೆಟ್ಟಿ
ದ್ವಿತೀಯ: ಕೂಳೂರು ಪೊಯ್ಯೆಲು ಪಿ.ಆರ್.ಶೆಟ್ಟಿ
ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ
ಹಗ್ಗ ಕಿರಿಯ:
ಪ್ರಥಮ: ಹೊಸಬೆಟ್ಟು ಏರಿಮಾರು ಬರ್ಕೆ ಚಂದ್ರಹಾಸ ಸಾಧು ಸನಿಲ್
ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್
ದ್ವಿತೀಯ: ಮಿಜಾರ್ ಪ್ರಸಾದ್ ನಿಲಯ ಪ್ರಸಿದ್ಧ ಶಕ್ತಿ ಪ್ರಸಾದ್ ಶೆಟ್ಟಿ
ಓಡಿಸಿದವರು: ನತೀಶ್ ಬಾರಾಡಿ
ನೇಗಿಲು ಹಿರಿಯ:
ಪ್ರಥಮ: ಕೃಷ್ಣಾಪುರ ನಡುಮನೆ ಪರಮೇಶ್ವರ ಸಾಲ್ಯಾನ್
ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್ .
ದ್ವಿತೀಯ: ಬೋಳದ ಗುತ್ತು ಜಗದೀಶ್ ಶೆಟ್ಟಿ ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್.M.ಶೆಟ್ಟಿ
ನೇಗಿಲು ಕಿರಿಯ:
ಪ್ರಥಮ: ಮಿಜಾರ್ ಪ್ರಸಾದ್ ನಿಲಯ ಪ್ರಸಿದ್ಧ ಶಕ್ತಿ ಪ್ರಸಾದ್ ಶೆಟ್ಟಿ
ಓಡಿಸಿದವರು: ಮಿಜಾರು ಅಶ್ವತಪುರ ಶ್ರೀನಿವಾಸ ಗೌಡ.
ದ್ವಿತೀಯ: ಬೆಳುವಾಯಿ ಸ್ನೇಹ ಸದನ ಲಕ್ಷ್ಮೀ ವಿನಯ ಕುಮಾರ್
ಓಡಿಸಿದವರು: ಅಳದಂಗಡಿ ರವಿ ಕುಮಾರ್
ಅಡ್ಡಹಲಗೆ:
ಪ್ರಥಮ: ಮೋರ್ಲ ಗಿರೀಶ್ ಆಳ್ವ
ಓಡಿಸಿದವರು: ಬಂಗಾಡಿ ಕುದ್ಮನ್ ಲೋಕಯ್ಯ ಗೌಡ
ದ್ವಿತೀಯ: ಮೇರಮಜಲ್ ಮಿಷನ್ ಗೋಡ್ವಿನ್ ವೆಲ್ವಿನ್ ವಾಸ್
ಓಡಿಸಿದವರು: ಸಾವ್ಯ ಗಂಗಯ್ಯ ಪೂಜಾರಿ.