ಕಾಸರಗೋಡು,ಮಾ 03 (MSP): ಅಡೂರು ಪಳ್ಳಂಜಿ ಸೇತುವೆಯಡಿಯಲ್ಲಿ ಪುರುಷ ಮತ್ತು ಮಹಿಳೆಯ ಮೃತದೇಹ ಅನುಮಾನಸ್ಪದ ರೀತಿಯಲ್ಲಿ ಮಾ.3 ರ ಭಾನುವಾರ ಬೆಳಿಗ್ಗೆ ಪತ್ತೆಯಾಗಿದೆ.
ಮೋರಿಯ ಅಡಿ ಭಾಗದಲ್ಲಿರುವ ಕೊಳವೆಯಲ್ಲಿ ಮೃತದೇಹಗಳು ಪತ್ತೆಯಾಗಿದ್ದು, ದಂಪತಿಗಳಾಗಿರಬಹುದು ಎಂದು ಶಂಕಿಸಲಾಗಿದೆ. ಸುಮಾರು 50-55 ರ ವಯಸ್ಸಿನ ಮದ್ಯವಯಸ್ಕರ ಮೃತದೇಹವಾಗಿದ್ದು, ಇವರ ಗುರುತು ಪತ್ತೆಯಾಗಿಲ್ಲ. ಪರಿಸರವಾಸಿಯೋರ್ವರು ಗಮನಿಸಿ ಆದೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ