ಉಡುಪಿ ಅ 31: ಮೋಜುಗಾಗಿ ರೈಲ್ವೇ ಸೇತುವೆಯಿಂದ ನೀರಿಗೆ ಹಾರಿದ ಯುವಕನ ಮೃತದೇಹ ಇಂದು ಉಡುಪಿಯ ಪೆರಂಪಳಿಯ ಸ್ವರ್ಣಾ ನದಿಯ ರೇಲ್ವೇ ಸೇತುವೆ ಬಳಿ ಸಿಕ್ಕಿದೆ. ಹಾಸನ ಮೂಲದ ಸಂತೆಕಟ್ಟೆ ಗೋಪಾಲಪುರದ ನಿವಾಸಿ ೨೫ ವರ್ಷ ಪ್ರಾಯದ ಸಾದ್ದಿಕ್ ಎಂಬರು ಮೃತ ಪಟ್ಟ ವ್ಯಕ್ತಿ. ಅ 31ರ ಸೋಮವಾರ ಸಂಜೆ ತನ್ನ ಸಹಪಾಠಿಗಳೊಂದಿಗೆ ವಾಯು ವಿಹಾರಕ್ಕೆ ಪೆರಂಪಳ್ಳಿ ರೈಲ್ವೇ ಸೇತುವೆಯ ಮೇಲೆ ತೆರಳಿದ್ದರು. ಈ ಸಂದರ್ಭ ಸಾದ್ದಿಕ್ ಮೋಜಿಗಾಗಿ ಸೇತುವೆಯಿಂದ ಸ್ವರ್ಣಾ ನದಿಗೆ ಹಾರಿದ್ದಾನೆ. ನದಿಯ ಆಳ ಹೆಚ್ಚಾಗಿದ ಕಾರಣ ಸಾದ್ದಿಕ್ ಈಜಲಾಗದೇ ನೀರಿನಲ್ಲಿ ಮುಳುಗಿದ್ದಾನೆ. ಈತನನ್ನು ರಕ್ಷಣೆ ಮಾಡಲು ಆತನ ಸ್ನೇಹಿತ ಈಶ್ವರ ನಗರ ನಿವಾಸಿ ಸೀಯಾನ್ ಕೂಡಾ ನೀರಿಗೆ ಹಾರಿದ್ದಾರೆ. ಆದ್ರೆ ಎಷ್ಟೇ ಪ್ರಯತ್ನ ಪಟ್ಟರು ಸಾದ್ದಿಕ್ ಅವರನ್ನು ರಕ್ಷಣೆ ಮಾಡಲು ಸೀಯಾನ್ ಅವರಿಗೆ ಸಾದ್ಯವಾಗಲ್ಲಿಲ್ಲ. ನಿನ್ನೆಯಿಂದ ಸಾದ್ದೀಕ್ ಮೃತದೇಹದ ಹುಡುಕಾಟ ನಡೆಸಲಾಗಿದ್ದು ಇಂದು ಸಂಜೆ ನದಿಯ ಮದ್ಯಭಾಗದಲ್ಲಿ ಅವರ ಮೃತದೇಹ ಸಿಕ್ಕಿದೆ. ಮಣಿಪಾಲ ಪೋಲಿಸರು ಸ್ಥಳಕ್ಕೆ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.