ಕಾರ್ಕಳ,ಮಾ 03 (MSP): ದೇಶದ ಭದ್ರತೆಯ ವಿಚಾರವನ್ನು ಮುಂದಿಟ್ಟು ಬಿಜೆಪಿ ರಾಜಕೀಯ ಮಾಡಲು ಹೊರಟಿದೆ. ಇತಿಹಾಸ ತಿರುಚಿ ನೋಡುವ ಪ್ರವೃತ್ತಿಯನ್ನು ಬಿಜೆಪಿ ಬೆಳೆಸಬೇಕು. ಈ ಹಿಂದೆ ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನ ಸೋಲು ಕಂಡಿದ್ದವು.
ಬಾಂಗ್ಲಾ ವಿಚೋಚನೆ ಸಂದರ್ಭದಲ್ಲಿ ಪಾಕಿಸ್ತಾನದ ದಂಡ ನಾಯಕ ಹಾಗೂ ಆ ದೇಶದ ಸೈನಿಕರು ಭಾರತಕ್ಕೆ ಶರಣಾಗಿರುವ ಘಟನೆನಾವಳಿಯು ಇಡೀ ವಿಶ್ವವೇ ಭಾರತದತ್ತ ಗಮನ ಸೆಳೆದ ಯುದ್ಧವಾಗಿತ್ತು. ಆ ಎಲ್ಲಾ ಬೆಳವಣಿಯನ್ನು ಕಾಂಗ್ರೆಸ್ ಇದು ವರೆಗೆ ರಾಜಕೀಯಕ್ಕೆ ಬಳಸಿಲ್ಲ. ದೇಶದ ಭದ್ರತೆಯ ವಿಚಾರದಲ್ಲಿ ರಾಜಕೀಯ ಮಾಡುವ ಪ್ರವೃತ್ತಿ ಕಾಂಗ್ರೆಸ್ನದಲ್ಲ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಸಂಸದ ಎಂ.ವೀರಪ್ಪ ಮೊಯಿಲಿ ಹೇಳಿದರು. ಕಾರ್ಕಳ ಮಂಜುನಾಥ ಪೈ ಸಭಾಂಗಣದಲ್ಲಿ ಮಾ.02ರ ಶನಿವಾರ ನಡೆದ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಮೇ ತಿಂಗಳಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗಲಿದ್ದಾರೆ. ಮೋದಿಯವರ ಬಗ್ಗೆ ಭ್ರಮೆ ನಿರಸನವಾಗಿದೆ. ಅಧಿಕಾರಕ್ಕೇರುವ ಮುನ್ನ ರೈತರ ಸಾಲಮನ್ನಾ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ ಮುಂತಾದ ಪೊಳ್ಳು ಆಶ್ವಾಸನೆ ಕೊಟ್ಟಿದ್ದರು. ಅಧಿಕಾರಕ್ಕೆ ಬಂದ ಮೇಲೆ ಅಮಿತ್ ಷಾ ಅವರೇ ಅದು ಚುನಾವಣಾ ಭಾಷಣಕ್ಕಾಗಿ ಎಂದಿದ್ದಾರೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಯ ಬದಲು ಇದ್ದ ಉದ್ಯೋಗವನ್ನೇ ಜನತೆ ಕಳೆದುಕೊಂಡಿದ್ದಾರೆ. ಆರ್ಥಿಕವಾಗಿ ದೇಶ ದಿವಾಳಿಯಾಗಿದ್ದು, ಜನರ ದಿಕ್ಕನ್ನು ತಪ್ಪಿಸುವ ಉದ್ದೇಶದಿಂದ ದಿನಕ್ಕೊಂದು ನಾಟಕವಾಡುತ್ತಿದ್ದಾರೆ. ಈ ದೇಶದಲ್ಲಿ ಶ್ರೀಮಂತರು ಎತ್ತರೆತ್ತರಕ್ಕೇರುತ್ತಿದ್ದರೆ, ಬಡವರು ಒಂದೊತ್ತು ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆರೋಪಿಸಿದರು.
ಜಯಪ್ರಕಾಶ್ ಹೆಗ್ಡೆ ವಿರುದ್ಧ ವಾಗ್ದಾಳಿ
ಪ್ರಸ್ತುತ ದಿನಗಳಲ್ಲಿ ತುಂಬಿದ ಜಾತಿ ರಾಜಕಾರಣ ರಾಜಕೀಯ ಚಿತ್ರಣವನ್ನು ಬದಲಾಯಿಸುತ್ತಿದೆ. ಹಿಂದೆ ಈ ಪರಿಸ್ಥಿತಿ ನಿರ್ಮಾಣವಾಗಿದ್ದರೆ ನಾನು ಈ ಕ್ಷೇತ್ರದಲ್ಲಿ ಆರು ಬಾರಿ ಗೆಲುವು ಸಾಧಿಸುತ್ತಿರಲಿಲ್ಲ ಎಂದರು. ಜಾತಿ ವಿಷ ಕಳೆಯನ್ನು ಬುಡದಿಂದಲೇ ಕೀಳಬೇಕು. ವಿಷ ಕಳೆಯಿಂದ ಒಳ್ಳೆಯ ಬೆಳೆ ಬರುವುದಿಲ್ಲ. ಕಾಂಗ್ರೆಸ್ ಎನ್ನುವುದು ಒಂದು ಕುಟುಂಬವಾಗಿದೆ. ಜಾತ್ಯಾತೀತ ಸಿದ್ಧಾಂತದ ಮೇಲೆ ನಂಬಿಕೆ ಇರುವ ಏಕೈಕ ಪಕ್ಷ ಇದ್ದರೆ ಅದು ಕಾಂಗ್ರೆಸ್ ಆಗಿದೆ. ಉಡುಪಿ ಜಿಲ್ಲೆಯಲ್ಲಿ ಜಾತಿ ರಾಜಕಾರಣವನ್ನು ತಂದವರೇ ಕೆ.ಜಯಪ್ರಕಾಶ್ ಹೆಗ್ಡೆ ಎಂದು ಹರಿಹಾಯ್ದರು. ಅದನ್ನು ಬಿಜೆಪಿಯವರು ರಾಜಕೀಯಮಯಗೊಳಿಸಿ ಮುನ್ನೆಯುತ್ತಿದ್ದಾರೆ ಎಂದರು.
ಕಾರ್ಕಳದ ನಾಯಕ ಭಂಡಾರಿ
ಕಾರ್ಕಳಕ್ಕೆ ಹೆಚ್.ಗೋಪಾಲ ಭಂಡಾರಿ ಅವರೇ ಕಾಂಗ್ರೆಸ್ ಪಕ್ಷದ ಅಧಿನಾಯಕ. ರಾಜಕೀಯಕ್ಕಾಗಿ ವ್ಯಕ್ತಿಯ ತೇಜೋವಧೆ ಮಾಡುವ ಪ್ರವೃತ್ತಿ ಅವರು ಎಂದಿಗೂ ನಡೆಸಿಲ್ಲ. ಅವರ ಮೇಲೆ ನಮಗೆ ವಿಶ್ವಾಸವಿದೆ ಎಂದರು.
ಕಪ್ಪು ಚುಕ್ಕಿ ಇಲ್ಲದ ಆಡಳಿತ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ ಮಾತನಾಡಿ, ಸಿದ್ದ ರಾಮಯ್ಯ ನೇತ್ರತ್ವದ ಸರಕಾರದ ಆಡಳಿತದವಧಿಯಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದೇ ಉತ್ತಮ ಆಡಳಿತ ನೀಡಿದ್ದಾರೆ. ಪಕ್ಷಬೇಧ ಮರೆತು ಎಲ್ಲಾ ವಿಧಾನ ಸಭಾ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ. ಅನುದಾನ ಬಿಡುಗಡೆ ಮಾಡಿರುವುದನ್ನು ಜನತೆ ಮರೆಯುವಂತಿಲ್ಲ ಎಂದರು. ಸಾಮಾಜಿಕ ನ್ಯಾಯ ಗಮನದಲ್ಲಿಟ್ಟುಕೊಂಡು ನಮ್ಮ ಪಕ್ಷವು ಮಹಿಳೆಯರ, ಮಕ್ಕಳ, ರೈತರ ಮತ್ತು ಬಡವರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಸಮ್ಮೀಶ್ರ ಸರಕಾರದಲ್ಲಿ ರೈತರ ಸಾಲಮನ್ನಾಕ್ಕೆ ಒಟ್ಟು ೪೦ ಸಾವಿರ ಕೋಟಿ ರೂ. ನೀಡಿದ ಕೀರ್ತಿ ನಮ್ಮ ಪಕ್ಷಕ್ಕಿದೆ. ಮುಂಬರುವ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲೂ ಗೆಲುವು ನಮ್ಮದಾಗಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರದ ವಿರುದ್ಧ ಆರೋಪ ಮಾಡುವ ತಾಕೀತು ಬಿಜೆಪಿಗಿಲ್ಲ
ನಮ್ಮ ಜಿಲ್ಲೆಯ ಮರಳು ಸಮಸ್ಯೆ ಟೋಲ್ ಸಮಸ್ಯೆ ಯಿಂದ ಜನತೆ ತೊಂದರೆ ಪಡುತ್ತಿದ್ದಾರೆ ಇದಕ್ಕೆಲ್ಲಾ ಕಾರಣ ನಮ್ಮಕೇಂದ್ರ ಸರಕಾರ ನೇರ ಹೊಣೆ ಮರಳುಗಾರಿಕೆ ಸಿಅರ್ಜೆಡ್, ಟೋಲ್ ಇದು ಕೇಂದ್ರದ ಸಮಸ್ಯೆಯಾಗಿದೆ ಈ ಸಮಸ್ಯೆ ಯನ್ನು ಬಗೆಹರಿಸಲು ಸಾದ್ಯವಾಗದೇ ಜನತೆಯನ್ನು ರಾಜ್ಯ ಸರಕಾರದ ವಿರುದ್ದ ಎತ್ತಿಕಟ್ಟುವ ಕೆಲಸ ಈಬಿಜೆಪಿ ವತಿಯಿಂದ ನಡೆಯುತ್ತಿದೆ. ಅಲ್ಲದೆ ನಾಪತ್ತೆಯಾಗಿರುವ ಮಿನುಗಾರಿಕಾ ದೋಣಿ ಬಗ್ಗೆ ರಾಜ್ಯ ಸರಕಾರ ತನ್ನ ಶಕ್ತಿ ಮೀರಿ ಕೆಲಸ ನಡೆಸುತ್ತಿದೆ ಇಸ್ರೋಮೂಲಕ ಹುಡಕಾಟ ನಡೆಸಲಾಗಿದ್ದು ಪಕ್ಕದ ರಾಜ್ಯ ಮಹಾರಾಷ್ಟ್ರ ಗೋವಾ ಸರಕಾರಕ್ಕೆ ಈ ಬಗ್ಗೆ ಮನವರಿಕೆ ಮಾಡಲಾಗಿದೆ. ಜತೆಗೆ ತನಿಖೆ ಇನ್ನು ನಡೆಸಲಾಗುತ್ತಿದೆ.ಕೇಂದ್ರ ಸರಕಾರ ಜವಾಬ್ದಾರಿ ಏನು ಅನ್ನುದು ಅರಿತು ಜನರ ಸಮಸ್ಯೆಗೆ ಇನ್ನಾದರೂ ಸ್ಪಂದಿಸಲಿ. ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಯುವ ನಾಯಕ ಹರ್ಷ ಮೊಯ್ಲಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುಧಾಕರ ಎನ್ ಕೋಟ್ಯಾನ್, ನೀರೆ ಕೃಷ್ಣ ಶೆಟ್ಟಿ, ಕಾಂಗ್ರೆಸ್ ಪ್ರಮುಖರಾದ ಅಶೋಕ್ ಕೊಡವೂರು, ಎಂ.ಎ.ಗಫೂರ್, ಮುರಳೀಧರ ಶೆಟ್ಟಿ, ಕೊಳ್ಕೆಬೈಲು ಕಿಸಾನ್ ಹೆಗ್ಡೆ, ಇಸ್ಮಾಯಿಲ್ ಅತ್ರಾಡಿ, ಸುಭಿತ್ ಕುಮಾರ್, ಶ್ಯಾಮ ಎನ್.ಶೆಟ್ಟಿ, ಆರೀಫ್ ಕಲ್ಲೊಟ್ಟೆ, ಸೀತಾನದಿ ರಮೇಶ್ ಹೆಗ್ಡೆ, ಸುಧಾಕರ ಶೆಟ್ಟಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭ ಬ್ಲಾಕ್ ಕಾಂಗ್ರೆಸ್ನ ನೂತನ ಅಧ್ಯಕ್ಷರಾದ ಶೇಖರ್ ಮಡಿವಾಳ, ಮಂಜುನಾಥ ಪೂಜಾರಿ ಮುದ್ರಾಡಿ ಹಾಗೂ ನಗರ ಕಾಂಗ್ರೆಸ್ ಅಧ್ಯಕ್ಷ ಮಧುಕರ ಶೆಟ್ಟಿ ಅಧಿಕಾರ ಸ್ವೀಕರಿಸಿದರು. ವಕ್ತಾರ ಬಿಪಿನ್ಚಂದ್ರಪಾಲ್ ನಕ್ರೆ ಕಾರ್ಯಕ್ರಮ ನಿರೂಪಿಸಿದರು.