ಮಂಗಳೂರು, ಡಿ. 10 (DaijiworldNews/SM): ಶಿರಾಡಿ ಘಾಟ್ ರಸ್ತೆ ಸಂಪೂರ್ಣ ಹದಗೆಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕರಾವಳಿಗೆ ಆಗಮಿಸಿದ ಸಿಎಂ ಬಸವರಾಜ್ ಬೊಮ್ಮಯಿಯವರು ಪ್ರತಿಕ್ರಿಯೆ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯವರು ರಿಪೇರಿ ಮಾಡುತ್ತೇವೆ ಎಂದಿದ್ದರು. ಈ ವಾರದಲ್ಲೇ ವಿಶೇಷ ಸಭೆ ಕರೆದು ಈ ಬಗ್ಗೆ ಚರ್ಚೆ ನಡೆಸುತ್ತೇವೆ. ಶಿರಾಡಿ ಘಾಟ್ ನಲ್ಲಿ ಮೂರು ವಿಧಗಳ ಯೋಜನೆಗಳಿವೆ. ತಾತ್ಕಾಲಿಕ ಡಾಮರೀಕರಣ ಮಾಡಿ ಸಂಚಾರ ಸುಗಮವಾಗಿಸುವುದು. ವೈಟ್ ಟಾಪಿಂಗ್, ಸುರಂಗ ಮಾರ್ಗದ ಕುರಿತು ಚರ್ಚಿಸುತ್ತೇವೆ.
ಎಲ್ಲದಕ್ಕೂ ಕೂಡಾ ಸಮಗ್ರವಾಗಿ ಪರಿಹಾರ ನೀಡುತ್ತೇವೆ. ರಾ. ಹೆದ್ದಾರಿ ನಿರ್ದೇಶಕರ ಸಭೆ ಕರೆದು ಈ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ತಿಳಿಸಿದ್ದಾರೆ