ಮಂಗಳೂರು, ಡಿ. 10 (DaijiworldNews/SM):ಯಾವುದೋ ಗುಲಾಮಿ ಪರಿಸ್ಥಿತಿಯಲ್ಲಿ ಅದ ಸಲಾಂ ಆರತಿ ಬದಲಾಯಿಸಬೇಕು. ನಮ್ಮ ದೇವಾಲಯಗಳಲ್ಲಿ ನಮ್ಮ ಸಾಂಸ್ಕೃತಿಕ ನೆಲೆಗಟ್ಟು ಮುಖ್ಯ. ಹಾಗಾಗಿ ಸಲಾಂ ಆರತಿ ಬದಲಾವಣೆ ಆಗಲೇ ಬೇಕು ಎಂದು ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನೈತಿಕ ಪೊಲೀಸ್ ಗಿರಿ ಸಂಬಂಧ ಪೊಲೀಸರು ಪರಿಶೀಲನೆ ನಡೆಸ್ತಾರೆ. ಪರಿಶೀಲಿಸಿ ಕ್ರಮ ಕೈಗೊಳ್ತಾರೆ, ಕಾನೂನು ಕೈಗೆತ್ತಿಕೊಳ್ಳಲು ಬಿಡಲ್ಲ. ಯಾರೂ ಪ್ರಚೋದನೆ ಮಾಡಬಾರದು, ಶಾಂತಿ ಸುವ್ಯವಸ್ಥೆ ಕಾಪಾಡಬೇಕು.
ದ.ಕ ಜಿಲ್ಲೆಯಲ್ಲಿ ಒಂದೆರಡು ಕೊಲೆ ಬಿಟ್ಟು ಬೇರೆ ಅಹಿತಕರ ಘಟನೆ ನಡೆದಿಲ್ಲ. ನಮ್ಮ ಪೊಲೀಸರು ಶಾಂತಿ ಕಾಪಾಡಿಕೊಂಡು ಬಂದಿದ್ದಾರೆ, ಸಹಕಾರ ಕೊಡಬೇಕು ಎಂದು ಮಂಗಳೂರು ಏರ್ ಪೋರ್ಟ್ ನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.