ಉಡುಪಿ, ಡಿ 09 (DaijiworldNews/SM): ಬೆಂಗಳೂರಿನ ಎಚ್ಎಎಲ್ ಕುಂದನಹಳ್ಳಿ ಗೇಟ್ ಬಳಿ ಪುಡಿ ರೌಡಿಗಳು ಬೇಕರಿ ಉದ್ದಿಮೆ ನಡೆಸುತ್ತಿರುವ ಬೈಂದೂರಿನ ಯುವಕರ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಕುಂದನಹಳ್ಳಿ ಗೇಟ್ ಬಳಿ ಬೈಂದೂರು ಮೂಲದವರಾದ ನಿತಿನ್ ಶೆಟ್ಟಿ, ಪ್ರಜ್ವಲ್ ಶೆಟ್ಟಿ, ನವೀನ್ ಶೆಟ್ಟಿ ಬೇಕರಿ ವ್ಯವಹಾರ ನಡೆಸುತಿದ್ದು ನಿನ್ನೆ ಸಂಜೆ ಸಮಯ ಬೇಕರಿಗೆ ಬಂದಿದ್ದ ಸ್ಥಳೀಯ ಕೆಲ ಯುವಕರು ಕ್ಷುಲ್ಲಕ ಕಾರಣಕ್ಕೆ ನಿತಿನ್, ಪ್ರಜ್ವಲ್, ನವೀನ್ ಮೇಲೆ ಹಲ್ಲೆ ನಡೆಸಿದ್ದಾರೆ.
ಬೇಕರಿಯಲ್ಲಿದ್ದ ಇಬ್ಬರ ಮೇಲೆ ಮರಾಣಾಂತಿಕ ಹಲ್ಲೆ ನಡೆಸಿರುವ ಯುವಕರು ಕಾಲಿನಿಂದ ತುಳಿದು ಅಂಗಡಿಯ ವಸ್ತುಗಳಿಗೆ ಕೂಡಾ ಹಾನಿ ಉಂಟು ಮಾಡಿದ್ದಾರೆ. ಸದ್ಯ ಘಟನೆಯ ಕುರಿತ ಸಿಸಿ ಕ್ಯಾಮೆರಾ ಪುಟೇಜ್ ವೈರಲ್ ಆಗಿದ್ದು ಕ್ರಮಕ್ಕೆ ಆಗ್ರಹಿಸಲಾಗಿದೆ.
ಇನ್ನು ಘಟನೆಯ ಕುರಿತಂತೆ ಬೈಂದೂರು ಶಾಸಕರಾದ ಸುಕುಮಾರ್ ಶೆಟ್ಟಿ ಹಲ್ಲೆಗೆ ಒಳಗಾದ ಯುವಕರು ಮತ್ತು ಬೆಂಗಳೂರು ಪೋಲಿಸ್ ಕಮಿಷನರ್ ಜೊತೆ ಮಾತುಕತೆ ನಡೆಸಿದ್ದು, ಯುವಕರಿಗೆ ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿದ್ದಾರೆ.