ಕಾರ್ಕಳ, ಡಿ 9 (DaijiworldNews/HR): ಕೆದಿಂಜೆ ಮಾವಿನ ಕಟ್ಟೆ ಎಂಬಲ್ಲಿ ರಿಕ್ಷಾವೊಂದಕ್ಕೆ ಬಸ್ಸು ಡಿಕ್ಕಿ ಹೊಡೆದ ಪರಿಣಾಮವಾಗಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸಾವಿಗೀಡಾದ ಘಟನೆಗೆ ಸಂಬಂಧಿಸಿದಂತೆ ಬಸ್ಸು ಚಾಲಕ ಅಪರಾಧಿ ಎಂದು ಕಾರ್ಕಳ ನ್ಯಾಯಾಲಯವು ತೀರ್ಪು ನೀಡಿ ಶಿಕ್ಷೆ ವಿಧಿಸಿದೆ.
2014 ಅಕ್ಟೋಬರ್ 17 ರಂದು ಸಂಜೆ ಈ ಘಟನೆ ಸಂಭವಿಸಿತ್ತು. ಕಾರ್ಕಳ ದಿಂದ ಪಡುಬಿದ್ರೆ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ಸೊಂದು ಎದುರುಗಡೆಯಿಂದ ಬರುತ್ತಿದ್ದ ರಿಕ್ಷಾವೊಂದಕ್ಕೆ ಡಿಕ್ಕಿ ಹೊಡೆದಿತ್ತು. ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ 3 ಜನ ವಯಸ್ಕರು ಮತ್ತು ಚಿಕ್ಕ ವಯಸ್ಸಿನ ಮಕ್ಕಳನ್ನು ಸೇರಿದಂತೆ 9 ಜನ ಗಾಯಗೊಂಡಿದ್ದರು. ಗಾಯಾಳುಗಳ ಪೈಕಿ ಜಮೀಲಾ ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಹಾಗೂ ನಿಹಾ ಅವರನ್ನು ಉಡುಪಿಯ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮಾರ್ಗ ಮೃತಪಟ್ಟಿದ್ದರು. ಈ ಕುರಿತು ಅಂದಿನ ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕ ಜಿ ಎಂ ನಾಯ್ಕರವರು ಆರೋಪಿ ನಂದಳಿಕೆ ಕಕ್ಕೆಪದವಿನ ಶ್ರೀನಿವಾಸ ಪೂಜಾರಿ ವಿರುದ್ಧ ದೋಷಾರೋಪಣೆಯನ್ನು ಕಾರ್ಕಳ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಕಾರ್ಕಳದ 2ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ನ್ಯಾಯಾಧೀಶೆ ಚೇತನಾ ಸಿ.ಎಫ್ ಅವರು ಪ್ರಕರಣದ ವಿಚಾರಣೆ ನಡೆಸಿದ್ದಾರೆ.
ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಲಾಗಿದ್ದ ಶ್ರೀನಿವಾಸ ಅಪರಾಧಿ ಎಂದು ತೀರ್ಪು ನೀಡಿ, 6 ತಿಂಗಳ ಸಾಧಾರಣ ಸಜೆ ಮತ್ತು 5000 ದಂಡ. ತಪ್ಪಿದ್ದಲ್ಲಿ 1 ತಿಂಗಳ ಸಾಧಾರಣ ಸಜೆ, 5000ದಂಡ ತಪ್ಪಿದ್ದಲ್ಲಿ 1ತಿಂಗಳ ಸಾಧಾರಣ ಸಜೆ, 500 ದಂಡ ತಪ್ಪಿದ್ದಲ್ಲಿ 15 ದಿನಗಳ ಸಾಧಾರಣ ಸಜೆ, 1000 ದಂಡ ತಪ್ಪಿದ್ದಲ್ಲಿ 1 ತಿಂಗಳ ಸಾಧಾರಣ ಸಜೆ ಸೇರಿದಂತೆವಿವಿಧ ಕಲಂ ಅನ್ವಯ ಒಟ್ಟು ಆರು ತಿಂಗಳ ಸದಾಸಜೆ, ರೂ.7500 ದಂಡ ತಪ್ಪಿದರೆ 2 ತಿಂಗಳು 15 ದಿನ ಸದಾಸಜೆ ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ರಾಜಶೇಖರ್ ಪಿ ಶಾಮರಾವ್ ವಾದಿಸಿದ್ದರು.