ಬಂಟ್ವಾಳ, ಡಿ 08 (DaijiworldNews/SM): ತಮ್ಮ ಪಟ್ಟಾ ಜಮೀನಿಗೆ ಸಂಬಂಧಿಸಿ ಅಳವಡಿಸಿದ ಕಬ್ಬಿಣದ ಗೇಟನ್ನು ಪುತ್ತಿಲ ಗ್ರಾಮದ ಬರಮೇಲು ನಿವಾಸಿ ಚಂದ್ರಶೇಖರ ಅವರ ಪುತ್ರ ಕುಲದೀಪ್ ಶೆಟ್ಟಿ ಎಂಬವರು ಅತಿಕ್ರಮಣ ಮಾಡಿ ಕಳವು ಮಾಡಿದ್ದು ಈ ಬಗ್ಗೆ ಪುಂಜಾಲಕಟ್ಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಇದೀಗ ಇಡೀ ಪ್ರಕರಣದ ಸತ್ಯಾಂಶವನ್ನು ಮರೆಮಾಚಿ ದಿಕ್ಕು ತಪ್ಪಿಸುತ್ತಿದ್ದಾನೆ ಎಂದು ಜಮೀನಿನ ಮಾಲಕಿ ಭವಾನಿ ವಸಂತ ಗೌಡ ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಡಿ.2 ರಂದು ತಾನು ತನ್ನ ಪತಿ ವಸಂತ ಗೌಡ ಹಾಗೂ ಕೆಲಸದ ಆಳು ಧರ್ಣಪ್ಪ ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿರುವ ವೇಳೆ ಸಂಜೆ 4 ಗಂಟೆ15 ನಿಮಿಷಕ್ಕೆ ಚಂದ್ರಶೇಖರ ಶೆಟ್ಟಿ ಮತ್ತುಕುಲದೀಪ್ ಶೆಟ್ಟಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇದರ ರಾಜ್ಯ ಉಪಾಧ್ಯಕ್ಷರ ವಾಹನ ಜೊತೆ ಹಸಿರು ಶಾಲು ದಾರಿಗಳು ಆಗಮಿಸಿ ಕಬ್ಬಿಣದ ಗೇಟನ್ನು ಮುರಿದು ಪಿಕಪ್ ವಾಹನದಲ್ಲಿ ತುಂಬಿಸಿ ಸಾಗಿಸಿದ್ದಾರೆ.
ಈ ವೇಳೆ ತಾವು ಅವರನ್ನು ನಿಲ್ಲಿಸುವಂತೆ ಸೂಚಿಸಿದರು, ಅವರು ವಾಹನ ನಿಲ್ಲಿಸಿ ರಭಸದಲ್ಲಿ ಹೋಗಿದ್ದಾರೆ. ಇದೇ ವೇಳೆ ಈ ಘಟನೆಯ ಛಾಯಾಚಿತ್ರವನ್ನು ಸ್ಥಳೀಯರು ಸೆರೆ ಹಿಡಿಯಲಾಗಿದೆ.