ಬಂಟ್ವಾಳ, ಡಿ 08 (DaijiworldNews/SM): ಪುಂಜಾಲಕಟ್ಟೆ ಎಸ್. ಐ.ಸುತೇಶ್ ಅವರನ್ನು ಆಡಳಿತ ಕರ್ತವ್ಯ ಲೋಪ ಕಾರಣ ನೀಡಿ ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ಮಧ್ಯ ರಾತ್ರಿ 12 ಗಂಟೆ ಗೆ ಆಡಳಿತ ಕರ್ತವ್ಯ ಲೋಪದ ಕಾರಣ ನೀಡಿ ಅದೇಶ ಕಳುಹಿಸಿದೆ. ಸದ್ಯ ಮಂಗಳೂರು ಎಸ್. ಪಿ.ಕಚೇರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದ್ದು,ಇತ್ತೀಚಿಗೆ ಯುವ ವಕೀಲನ ಬಂಧನ ವಿಚಾರದಲ್ಲಿ ಎಸ್.ಐ.ಸುತೇಶ್ ಅವರು ವಿವಾದದಲ್ಲಿ ಸಿಲುಕಿದ್ದರು. ಅ ಬಗ್ಗೆ ವಕೀಲರ ವಿವಿಧ ಸಂಘಟನೆ ಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಪ್ರಸ್ತುತ ಉಪ್ಪಿನಂಗಡಿ ಎಸ್ಐ ನಂದಕುಮಾರ್ ಅವರಿಗೆ ಪುಂಜಾಲಕಟ್ಟೆ ಠಾಣೆಯ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿದು ಬಂದಿದೆ.