ಉಳ್ಳಾಲ, ಡಿ. 01 (DaijiworldNews/SM) : ಇಲ್ಲಿನ ತೊಕ್ಕೊಟ್ಟು ಕಾಪಿಕಾಡು ಸಮೀಪ ಮನೆಯೊಂದರ ಬಾವಿಯಲ್ಲಿ ಪತ್ತೆಯಾದ ಹಾಸನ ಅರಸೀಕೆರೆ ನಿವಾಸಿ ಮಹಾಂತೇಶ್ ಕುರಿತು ಅಸ್ವಾಭಾವಿಕ ಸಾವು ಪ್ರಕರಣ ಎಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಿಂದ ಉಳ್ಳಾಲ ಠಾಣೆಗೆ ಸಹೋದರಿ ಆಗಮಿಸಿದ್ದು, ಮದುವೆ ವಿಚಾರಕ್ಕೆ ಸಂಬಂಧಿಸಿ ಮಹಾಂತೇಶ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಮೈಸೂರಿನಲ್ಲಿ ಮದುವೆಯಾಗಲೆಂದು ಯುವತಿಯನ್ನು ನೋಡಿದ್ದು, ಆಕೆಯನ್ನು ತಿರಸ್ಕರಿಸಿದ್ದರು. ಇದಾದ ನಂತರ ಖಿನ್ನತೆಗೆ ಒಳಗಾಗಿದ್ದ ಮಹಾಂತೇಶ್, ಹಾಸನದ ಹೆತ್ತವರಲ್ಲಿ ಪಾಸ್ ಪೋಟ್೯ ರಿನೀವಲ್ ಗಾಗಿ ಮಂಗಳೂರಿಗೆ ತೆರಳುವುದಾಗಿ ಸುಳ್ಳು ಹೇಳಿ ತೆರಳಿದ್ದರು. ನ.31 ರಂದು ಮಂಗಳೂರಿಗೆ ಬಂದವರು, ತೊಕ್ಕೊಟ್ಟು ಲಾಡ್ಜ್ ನಲ್ಲಿ ತಂಗಿದ್ದರು. ಅಲ್ಲಿ ತಡರಾತ್ರಿವರೆಗೂ ಬಾರ್ ನಲ್ಲಿ ಇರುವ ಸಿಸಿಟಿವಿ ದಾಖಲೆಯಿದೆ. ಅಲ್ಲಿಂದ ಮೊಬೈಲ್, ಲಾಡ್ಜ್ ಕೀ ಎಲ್ಲವನ್ನೂ ಟೇಬಲಲ್ಲೇ ಬಿಟ್ಟು ಮಹಾಂತೇಶ್ ಏಕಾಏಕಿ ಹೊರಗೆ ತೆರಳಿದ್ದಾರೆ . ಪ್ರಕರಣದಲ್ಲಿ ಮಹಾಂತೇಶ್ ದೂರದ ಹಾಸನದಿಂದ ತೊಕ್ಕೊಟ್ಟು ಗೆ ಬಂದು ಉಳಿದಿರಲು ಕಾರಣ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಉಳ್ಳಾಲದ ಠಾಣಾಧಿಕಾರಿ ಸಂದೀಪ್ ತಿಳಿಸಿದ್ದಾರೆ.