ಉಡುಪಿ, ಡಿ. 05 (DaijiworldNews/SM) : ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯನ್ನುಅತ್ಯಂತ ಪಾರದರ್ಶಕವಾಗಿ, ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದಂತೆ ನಡೆಸಲಾಗುತ್ತಿದೆಎಂದುಜಿಲ್ಲೆಯಎಲ್ಲಾರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆಜಿಲ್ಲಾಧಿಕಾರಿಕೂರ್ಮಾರಾವ್ ಎಂ. ತಿಳಿಸಿದರು.
ಅವರುಇಂದುರಜತಾದ್ರಿಯಜಿಲ್ಲಾಧಿಕಾರಿಕಚೇರಿ ಸಭಾಂಗಣದಲ್ಲಿ ನಡೆದಜಿಲ್ಲೆಯ ವಿವಿಧರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗಿನ ಸಭೆಯಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚುನಾವಣಾಆಯೋಗದ ಮಾರ್ಗಸೂಚಿಯ ನಿರ್ದೇಶನದಂತೆಜಿಲ್ಲೆಯಲ್ಲಿಮತದಾರರ ಪಟ್ಟಿಯ ಪರಿಷ್ಕರಣೆ ನಡೆಸಲಾಗುತ್ತಿದ್ದು, ಮತದಾರರ ಪಟ್ಟಿಯಲ್ಲಿಯುವ ಮತದಾರರ ಸೇರ್ಪಡೆಗೆಆದ್ಯತೆ ನೀಡಿದ್ದು, ಕಾಲೇಜುಗಳಲ್ಲಿ ವಿಶೇಷ ನೋಂದಣಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.ಮತದಾರರ ಪಟ್ಟಿಯ ಪರಿಶೀಲನೆ ಸಂದರ್ಭದಲ್ಲಿತಾನೂ ಸಹ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಸರುಗಳನ್ನು ಕೈಬಿಡುವಾಗಅದಕ್ಕೆ ಪೂರಕವಾದಎಲ್ಲಾ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಮಹಜರು ಮಾಡಲಾಗಿದೆಎಂದರು.
ನವೆAಬರ್ 9ರಿಂದಆರAಭಗೊAಡಿರುವ ವಿಶೇಷ ಪರಿಷ್ಕರಣೆಕುರಿತಂತೆ ಪ್ರತೀ ವಾರದ ಮತದಾರರ ಪಟ್ಟಯಲ್ಲಿನ ಸೇರ್ಪಡೆ, ತಿದ್ದುಪಡಿ, ಬದಲಾವಣೆ, ತೆಗೆದುಹಾಕುವಿಕೆಕುರಿತ ವಿವರವಾದ ಅಂಕಿ ಅಂಶಗಳನ್ನು ಎಲ್ಲಾರಾಜಕೀಯ ಪಕ್ಷಗಳಿಗೆ ಪರಿಶೀಲನೆಗೆ ನೀಡಲಾಗುತ್ತಿದ್ದು, ಕ್ಷೇತ್ರಮಟ್ಟದಎಲ್ಲಾ ಸಿಬ್ಬಂದಿಗಳಿಗೆ ಅಗತ್ಯತರಬೇತಿ ನೀಡಲಾಗಿದ್ದು, ಮತದಾರರ ಪಟ್ಟಿಯಕುರಿತುರಾಜಕೀಯ ಪಕ್ಷಗಳು ಯಾವುದೇ ಆಕ್ಷೇಪಣೆಗಳನ್ನು ಸಲ್ಲಿಸಿದ್ದಲ್ಲಿ ಮುಕ್ತವಾಗಿ ಪರಿಶೀಲನೆ ನಡೆಸಲಾಗುವುದುಎಂದರು.
ಸಾರ್ವಜನಿಕರುಮತದಾರರ ಪಟ್ಟಿಯಲ್ಲಿನತಮ್ಮ ಸಂದೇಹಗಳನ್ನು ಬಗೆಹರಿಸಿಕೊಳ್ಳಲು ಉಚಿತ ಸಹಾಯವಾಣಿ ಸಂಖ್ಯೆ 1950 ನ್ನು ಸಂಪರ್ಕಿಸಬಹುದುಎAದು ತಿಳಿಸಿದ ಜಿಲ್ಲಾಧಿಕಾರಿಗಳು, ರಾಜಕೀಯ ಪಕ್ಷಗಳ ವತಿಯಿಂದಬೂತ್ ಮಟ್ಟದ ಸಹಾಯಕರ ಪಟ್ಟಿಯನ್ನು ಶೀಘ್ರವಾಗಿ ನೀಡಿದಲ್ಲಿಅವರ ವಿವರಗಳನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು ಹಾಗೂ ಸದ್ರಿಯವರು ಬಿ.ಎಲ್.ಓ ಗಳೊಂದಿಗೆತಮ್ಮ ವ್ಯಾಪ್ತಿಯಲ್ಲಿನ ಮತದಾರರ ಪಟ್ಟಿಯ ಸಮಸ್ಯೆಗಳ ಬಗ್ಗೆ ಸಮನ್ವಯದಿಂದಕಾರ್ಯನಿರ್ವಹಿಸಲು ಸಾಧ್ಯವಾಗಲಿದೆಎಂದರು.
ಸಭೆಯಲ್ಲಿಅಪರಜಿಲ್ಲಾಧಿಕಾರಿ ವೀಣಾ ಬಿ.ಎನ್, ಭಾರತೀಯಜನತಾ ಪಕ್ಷದಚಂದ್ರಶೇಖರ ಪ್ರಭು, ಬೈಕಾಡಿ ಸುಪ್ರಸಾದ್ ಶೆಟ್ಟಿ, ಜೆ.ಡಿ.ಎಸ್ ನ ಜಯರಾಮಆಚಾರ್ಯ, ಕಾಂಗ್ರೆಸ್ನ ಹಬೀಬ್ ಅಲಿ, ಸಂತೋಷ್ಕುಲಾಲ್, ನವೀನ್ಚಂದ್ರಎಸ್ ಸುವರ್ಣ ಉಪಸ್ಥಿತರಿದ್ದರು.