ಮೂಡುಬಿದಿರೆ, ಡಿ 05 (DaijiworldNews/HR): ಕೊರೊನಾದ ಬಳಿಕ ಇದೀಗ ಮತ್ತೆ ವಿದೇಶಿಗರು ಹಡಗುಗಳ ಮೂಲಕ ಕರಾವಳಿಯ ಪ್ರವಾಸಿ ತಾಣಕ್ಕೆ ಬರುತ್ತಿದ್ದು, ಈ ಬಾರಿ ಹಡಗಿನಲ್ಲಿ ಅಮೇರಿಕಾ ಯೂರೋಪ್ ದೇಶ, ಕೊರಿಯಾ ದೇಶದ 686 ಜನ ಯಾತ್ರಿಕರು ಮೂಡುಬಿದಿರೆಯ ಸಾವಿರ ಕಂಬ ಬಸದಿಗೆ ಭೇಟಿ ನೀಡಿದ್ದಾರೆ.
ಜಗಪ್ರಸಿದ್ದ ಸಾವಿರ ಕಂಬ ಬಸದಿ ಅಧ್ಯಾತ್ಮದ ಶಾಂತಿ ಯ ಕೇಂದ್ರ ವಾಗಿದ್ದು ಜೈನ ರ ಆರಾಧನ ಕೇಂದ್ರ ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ ಹಾಗೂ ಎಲ್ಲಾ ಸಮುದಾಯದ ವರು ಭೇಟಿ ನೀಡುತ್ತಿರುದು ಈ ಬಸದಿಯ ವಿಶೇಷ ವೈವಿಧ್ಯಮಯ ಶಿಲಾ ಕಾಷ್ಠ ಶಿಲ್ಪದ ಕಲಾ ಆಗರವಾಗಿದ್ದು ಬಿನ್ನಾಣದ ಬಸದಿ ಎಂದು ಕಲಾ ರಸಿಕರಿಂದ ಪ್ರಶಂಸೆಗೆ ಒಳಗಾದ 1430ರಲ್ಲಿ ನಿರ್ಮಾಣಗೊಂಡ ಜೈನ ಶ್ರದ್ದಾ ಕೇಂದ್ರ ವಾಗಿದ್ದು ದಿನಂಪ್ರತಿ ಸಾವಿರಾರು ಯಾತ್ರಿಕರು ಭೇಟಿ ನೀಡುತ್ತಾರೆ.
ಇಲ್ಲಿಯ ಬಸದಿ ವಾಸ್ತು ರಚನೆ ಶಾಂತಿಯ ವಾತಾವರಣ ಭಗವಾನ್ ಚಂದ್ರ ನಾಥ ಸ್ವಾಮಿ ಸುವರ್ಣ ವರ್ಣದ ಸುಂದರ ಬಿಂಬ ನೋಡಿ ವಿಸ್ಮಿತ ರಾದ ವಿದೇಶಿಗರು ಬಸದಿ ಸುತ್ತ ಪ್ರದಕ್ಷಿಣೆ ಬಂದು ಭೈರಾ ದೇವಿ ಮಂಟಪದ ಕಲೆ ಕೆತ್ತನೆ ಕುಸುರಿ ವಿವಿಧ ಮಾನವ ಲೋಕದ ಜೀವನ ವೈವಿಧ್ಯ ಪಶು ಪಕ್ಷಿ ಪ್ರಾಣಿ ಜಗತ್ತು ನೃತ್ಯ ಯೋಗ ಮಲ್ಲ ಕಂಬ ಧ್ಯಾನ, ಯುದ್ಧ ದೃಶ್ಯ ಗಳನ್ನು ಕಣ್ತುಂಬ ನೋಡಿ ಸಂತೋಷ ಪಟ್ಟರು. ನಾಮ ಫಲಕ ದಲ್ಲಿ ಮುದ್ರಿಸಿದ ಚರಿತ್ರೆ ಓದಿ ತಿಳಿದರು. ಈ ಸಂಧರ್ಭ ಮೂಡು ಬಿದಿರೆ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ವಿದೇಶಿ ಯಾತ್ರೀಕರ ಬಸದಿ ಸಂಬಂಧ ಕೇಳಿದ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿ ಚಾರಿತ್ರಿಕ ಮಾಹಿತಿ ನೀಡಿದರು.
ಲಿಯಾ ಟ್ರಾವೆಲ್ ನ ಮಾಹಿತಿ ದಾರರು, ಮಂಡ್ಯ ಮೂಡುಬಿದಿರೆ ಮಂಗಳೂರು ಪರಿಸರದ ವಿವಿಧ ಶಾಲೆಗಳ ಶಾಲಾಪ್ರವಾಸಕ್ಕಾಗಿ ಬಂದ ವಿದ್ಯಾರ್ಥಿ ಗಳು ಜತೆಗಿದ್ದರು ಸ್ವಾಮೀಜಿ ಸರ್ವರಿಗೂ ಹರಸಿ ಆಶೀರ್ವದಿಸಿದರು. ಶ್ರೀಮಠ ಹಾಗೂ ಬಸದಿ ಶಿಬ್ಬಂದಿಗಳಾದ ಶ್ರೀ ಸುಧಾಕರ್, ಸೂರಜ್ ಪಣಿರಾಜ್, ಶ್ರೀನಾಥ್, ರಾಮ್ ಸಿಂಗ್ ಸಹಕರಿಸಿದರು.