ಉಡುಪಿ, ಡಿ 05DaijiworldNews/MS): ಭತ್ತದ ಮೂಟೆ ಹೊತ್ತ ಲಾರಿವೊಂದು ಚಾಲಕನ ನಿಯಂತ್ರಣ ತಪ್ಪಿ ಎರಡು ಟೂರಿಸ್ಟ್ ಕಾರಿನ ಮೇಲೆಯೇ ಪಲ್ಟಿ ಹೊಡೆದ ಘಟನೆ ಉಡುಪಿಯ ಕೆಳಪರ್ಕಳದ ಬಳಿ ನಡೆದಿದೆ.
ಅಪಘಾತದಿಂದಾಗಿ ಒಂದು ಕಾರ್ ಸಂಪೂರ್ಣ ಜಖಂ ಗೊಂಡಿದೆ. ಭತ್ತದ ಮೂಟೆ ಲಾರಿಯಿಂದ ಬೇರ್ಪಟ್ಟು ರಸ್ತೆಯೆಲ್ಲಾ ಬಿದ್ದಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಯಿತು. ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಉಡುಪಿಯಿಂದ ಪರ್ಕಳದ ಕಡೆ ಸಂಚರಿಸುವ ಬೇರೆ ಜಿಲ್ಲೆಯ,ಹಾಗೂ ಅನ್ಯ ರಾಜ್ಯದ ವಾಹನ ಚಾಲಕರಿಗೆ ಇಲ್ಲಿ ಗೊಂದಲ ಉಂಟಾಗುತ್ತದೆ. ಹೊಸ ರಸ್ತೆಯ ಕಾಮಗಾರಿ ನಡೆಯುವ ಸ್ಥಳದಲ್ಲಿ ಕಳೆದ 15 ದಿನಗಳಿಂದ ಸಂಚರಿಸಲು ಅವಕಾಶ ಮಾಡಿ ಕೊಟ್ಟಿರುತ್ತಾರೆ. ನಿನ್ನೆ ಸ್ಥಳೀಯರು . ವಾಹನ ಚಲಾವಣೆಯಿಂದ ಧೂಳಾಗುತ್ತದೆ ಎಂದು ಮಣಿಪಾಲ ಠಾಣೆಗೆ ದೂರು ಸಹ ಕೊಟ್ಟಿದ್ದಾರೆ. ಇಲ್ಲಿ ಯಾವುದೇ ಸೂಚನಾ ಫಲಕಗಳಿಲ್ಲ, ಮತ್ತು ರಕ್ಷಣಾಬ್ಯಾರಿಕೇಡ್ ಗಳನ್ನು ಕೂಡಾ ಹಾಕಲಾಗಿಲ್ಲ. ಸೂಕ್ತ ಬೆಳಕಿನ ವ್ಯವಸ್ಥೆಯೂ ಇಲ್ಲದೆ ವಾಹನ ಚಾಲಕರು ಹಳೆ ರಸ್ತೆಯಲ್ಲಿ ಸಂಚರಿಸುವುದೇ ಅಥವಾ ಹೊಸ ರಸ್ತೆಯಲ್ಲಿ ಸಂಚರಿಸುವುದೇ ಎಂದು ಗೊಂದಲಕ್ಕೀಡಾಗುತ್ತಿದ್ದಾರೆ.
ಈ ಹಿಂದೆಯೂ ಈ ಭಾಗದಲ್ಲಿ ವಾಹನ ಅಪಘಾತ ಘಟನೆ ನಡೆದಿದೆ ಹೊಸ ರಸ್ತೆಯ ಕಾಮಗಾರಿಯೇ ನಡೆಸುತ್ತಿರುವಾಗಲೇ ವಾಹನ ಸಂಚಾರಕ್ಕೆ ಅವಕಾಶ ಮಾಡಿ ಕೊಟ್ಟಿರುವುದೇ ಸಮಸ್ಯೆಗೆ ಕಾರಣವಾಗಿದೆ. ಕೆಳಪರ್ಕದ ಹಳೆ ರಸ್ತೆಗೆ ಸಂಪರ್ಕಿಸುವ ಎರಡು ರಸ್ತೆಗಳು ಕೂಡಾ ಸಂಪೂರ್ಣ ಹಾಳಾಗಿದೆ.