ಮಂಗಳೂರು, ಡಿ 04 (DaijiworldNews/SM): ‘ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕುವುದು ಮುಖ್ಯವಲ್ಲ. ಕಟ್ಟಡ, ಸ್ಕೂಲ್ ಯಾರೂ ಬೇಕಾದರೂ ಕಟ್ಟಬಹುದು. ಆದರೆ, ಅದಕ್ಕೆ ಜೀವ ತುಂಬುವವರು ವಿದ್ಯಾರ್ಥಿಗಳು. ಶಾಲೆಯನ್ನು ಉತ್ತುಂಗಕ್ಕೆ ಏರಿಸುವುದು ವಿದ್ಯಾರ್ಥಿಗಳ ಕೈಯಲ್ಲಿದೆ’ ಎಂದು ಚಿತ್ರನಟ ಕಿಚ್ಚ ಸುದೀಪ್ ಹೇಳಿದರು.
ಕಟೀಲು ದೇಗುಲದ ಶಿಕ್ಷಣ ಸಂಸ್ಥೆ ಸಂಯೋಜನೆಯಲ್ಲಿ ನಡೆದ ಭ್ರಮರ– ಇಂಚರ ನುಡಿಹಬ್ಬದಲ್ಲಿ ಅವರು ಮಾತನಾಡಿದರು. ‘ವಿದ್ಯಾರ್ಥಿ ಜೀವನವನ್ನು ಮಕ್ಕಳು ಚೆನ್ನಾಗಿ ಎಂಜಾಯ್ ಮಾಡಬೇಕು. ಈ ಜೀವನ ಮತ್ತೆ ಬರಲ್ಲ. ಸಮಯ ಅನ್ನೋದು ಮತ್ತೆ ಸಿಗಲ್ಲ. ಸಿಕ್ಕ ಅವಕಾಶವನ್ನು ಸದುಪಯೋಗ ಪಡೆಯಬೇಕು’ ಎಂದರು.