ಬೆಳ್ತಂಗಡಿ, ಡಿ 04 (DaijiworldNews/HR): ತಾಲೂಕಿನ ಮರೋಡಿ ಗ್ರಾಮದಲ್ಲಿ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟದ ಬ್ಯಾನರ್ ಹರಿದ ಪ್ರಕರಣಕ್ಕೆ ಮಹತ್ತರ ತಿರುವು ದೊರೆತಿದೆ.
ಸ್ಥಳೀಯ ನಿವಾಸಿಗಳೆಯಾದ ಮೂವರು ಅಪ್ರಾಪ್ತ ಮಕ್ಕಳಿಂದ ಈ ಕಕೃತ್ಯ ನಡೆದಿದ್ದು. ಇಂದು ಪೋಷಕರ ಸಹಿತ ಮೂವರು ಅಪ್ರಾಪ್ತರು ಮರೋಡಿಯ ಪೊಸರಡ್ಕ ಕ್ಷೇತ್ರಕ್ಕೆ ಬಂದು ತಪ್ಪು ಕಾಣಿಕೆಯನ್ನು ಸಲ್ಲಿಸಿ ತಪ್ಪೋಪ್ಪಿಕೊಂಡಿದ್ದಾರೆ.
ಇನ್ನು ಯಾರೇ ಕೃತ್ಯವನ್ನು ಎಸೆಗಿದ್ದರು 24 ಗಂಟೆಯೊಳಗಾಗಿ ಕ್ಷೇತ್ರಕ್ಕೆ ಬಂದು ತಪ್ಪೋಪ್ಪಿ ಕೊಳ್ಳಬೇಕೆಂದು ಸೂಚಿಸಲಾಗಿತ್ತು, ಆದರೆ ಇಂದು ಕೃತ್ಯವೇಸೆಗಿದ ಅಪ್ರಾಪ್ತರು ತಿಳಿಯದೆ ಈ ಕೃತ್ಯವನ್ನು ಎಸೆಗಿದ್ದಾರೆ. ಅವರ ತಪ್ಪನ್ನು ಮನ್ನಿಸಬೇಕೆಂದು ವಿನಂತಿಸಿ ಪೊಸರಡ್ಕ ಶ್ರೀ ದೈವ ಕೊಡಮಣಿತ್ತಾಯ ಹಾಗೂ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಯಕ್ಷಗಾನ ಆಯೋಜಕರ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಪ್ರಾರ್ಥಿಸಲಾಯಿತು.