ಕಾರ್ಕಳ, ಡಿ 04 (DaijiworldNews/DB): ಕುಕ್ಕೂಂದೂರು ಅಂಯ್ಯಪ್ಪನಗರ ಎಂಬಲ್ಲಿ ಕಾರ್ಕಳ -ಉಡುಪಿ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನದ ಸವಾರರೊಬ್ಬರು ಸಾವಿಗೀಡಾದ ಘಟನೆಗೆ ಸಂಬಂಧಿಸಿದಂತೆ ಖಾಸಗಿ ಬಸ್ ಚಾಲಕ ಅಪರಾಧಿ ಎಂದು ಹಿರಿಯ ಸಿವಿಲ್ ನ್ಯಾಯಧೀಶರು ಮತ್ತು ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿ ಚೇತನ್. ಎಸ್ .ಎಫ್ ತೀರ್ಪು ನೀಡಿ ಶಿಕ್ಷೆ ವಿಧಿಸಿದ್ದಾರೆ.
2018 ಮೇ 25ರ ರಾತ್ರಿ 9.15ರ ವೇಳೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಕುಕ್ಕುಂದೂರು ದುರ್ಗ ನಗರದ ಗರಡಿಬಳಿಯ ನಿವಾಸಿ ಹರಿಯಣ್ಣ ನಾಯಕ್ (54) ತೀವ್ರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದರು. ಕಾರ್ಕಳ ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯವು ವಾದ -ಪ್ರತಿವಾದಗಳನ್ನು ಆಲಿಸಿ, ಪ್ರಕರಣದಲ್ಲಿ ಆರೋಪಿನಾಗಿದ್ದ ಬಸ್ ಚಾಲಕ ಮೂಡುಬಿದಿರೆಯ ಮಿಜಾರು ಗ್ರಾಮದ ಹಂಡೇಲು ನಿವಾಸಿ ಅಬ್ದುಲ್ ರಹಮಾನ್ ಎಚ್. ಅಪರಾಧಿ ಎಂದು ತೀರ್ಪು ನೀಡಿ ಶಿಕ್ಷೆ ಪ್ರಕಟಿಸಿದೆ.
ಕಲಂ 279ರ ಅನ್ವಯ ಅತೀ ವೇಗ ಹಾಗೂ ನಿರ್ಲಕ್ಷ್ಯ ರೀತಿಯಲ್ಲಿ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣನಾಗಿರುವ ಹಿನ್ನಲೆಯಲ್ಲಿ 1,000 ರೂ. ದಂಡ ತಪ್ಪಿದಲ್ಲಿ 1 ತಿಂಗಳ ಸದಾ ಸಜೆ, 304ನೇ ಕಲಂ ಅನ್ವಯ ಅಪಘಾತದಲ್ಲಿ ಸಾವಿಗೀಡಾದ ಹಿನ್ನಲೆಯಲ್ಲಿ 6 ತಿಂಗಳುಗಳು ಸಾದಾ ಕಾರಾಗೃಹವಾದ ಹಾಗೂ 2,000 ರೂ. ದಂಡ ವಿಧಿಸಲಾಗಿದೆ. ದಂಡ ತೆರಲು ತಪ್ಪಿದಲ್ಲಿ 1 ತಿಂಗಳು ಸದಾ ಸಜೆ ವಿಧಿಸಿದೆ.
ಸರಕಾರಿ ಸಹಾಯಕ ಅಭಿಯೋಜಕಿ ಶೋಭಾ ಮಹದೇವ ನಾಯಕ್ ಸರಕಾರದ ಪರವಾಗಿ ವಾದಿಸಿದ್ದಾರೆ.