ಕಾಪು, ಫೆ 27(SM): ವಿದ್ಯುತ್ ಶಾಕ್ ತಗುಲಿ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಕಾಪು ಕೈಪುಂಜಾಲ್ ಎಂಬಲ್ಲಿ ನಡೆದಿದೆ. ನೇಪಾಳ ಮೂಲದ ಪತ್ತು ಸಾಹ್ನಿ ಮೃತ ಯುವಕ.
ಪತ್ತು ಸಾಹ್ನಿ ಕಳೆದ ಕೆಲವು ಸಮಯದಿಂದ ಕಾಪುವಿನಲ್ಲಿ ಸಿಗಡಿ ಕೆರೆಯಲ್ಲಿ ಕೆಲಸ ಮಾಡುತಿದ್ದರು. ಇಂದು ಕೂಡ ಎಂದಿನಂತೆ ಪತ್ತು ಸಾಹ್ನಿ ಕೆಲಸದಲ್ಲಿ ತೊಡಗಿಕೊಂಡಿದ್ದರು. ಆದರೆ ಕೆಲಸದ ಸಮಯದಲ್ಲಿ ಏಕಾಏಕಿ ವಿದ್ಯುತ್ ಶಾಕ್ ತಗುಲಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಬಗ್ಗೆ ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.