ಪುತ್ತೂರು, ಡಿ 03 (DaijiworldNews/DB): ಹಣಕಾಸಿನ ವಿಚಾರವಾಗಿ ನಡೆದ ಗಲಾಟೆ ತಾರಕಕ್ಕೇರಿ ಕುಡಿದ ಮತ್ತಿನಲ್ಲಿದ್ದ ಅಣ್ಣನೊಬ್ಬ ತಮ್ಮನನ್ನು ಕೊಲೆಗೈದ ಘಟನೆ ಕೆಮ್ಮಿಂಜೆ ಗ್ರಾಮದಲ್ಲಿ ನಡೆದಿದೆ.
ಮಾದೇವಪ್ಪ ಕೊಲೆಯಾದವರು. ಹಾವೇರಿ ಜಿಲ್ಲೆಯ ಹೊಸೂರು ನಿವಾಸಿ ನಿಂಗನ ಗೌಡ ಕೊಲೆ ಆರೋಪಿ. ಇಲ್ಲಿನ ಕಟ್ಟಡವೊಂದರಲ್ಲಿ ಡಿ.1ರ ಗುರುವಾರ ರಾತ್ರಿ ಘಟನೆ ಸಂಭವಿಸಿದೆ.
ಕೆಮ್ಮಿಂಜೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಸಹೋದರರು ಮದ್ಯ ಸೇವನೆ ಮಾಡಿ ಮದ್ಯದ ಅಮಲಿನಲ್ಲಿಯೇ ಹಣಕಾಸಿನ ವಿಚಾರವಾಗಿ ಜಗಳ ಮಾಡಿಕೊಂಡಿದ್ದಾರೆ. ಗಲಾಟೆ ತಾರಕಕ್ಕೇರಿದ್ದು, ತಮ್ಮ ಮಾದೇವಪ್ಪನ ಮೇಲೆ ಅಣ್ಣ ನಿಂಗನ ಗೌಡ ಹಲ್ಲೆ ಮಾಡಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ಮಾದೇವಪ್ಪ ಮೃತಪಟ್ಟಿದ್ದಾನೆ.
ಘಟನೆ ಬಳಿಕ ಆರೋಪಿ ನಿಂಗನ ಗೌಡ ಪರಾರಿಯಾಗಿದ್ದಾನೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.