ಮಂಗಳೂರು, ಡಿ. 01 (DaijiworldNews/SM) : : ಫುಟ್ಬಾಲ್ ದಂತಕತೆ ಡೀಗೊ ಮರಡೋನ ಅವರ “ಹ್ಯಾಂಡ್ ಆಫ್ ಗಾಡ್’ ಚಿನ್ನದ ಮೂರ್ತಿಯನ್ನು ಬೋಚೆ (ಡಾ| ಬೋಬಿ ಚೆಮನ್ನೂರ್) ಅವರ ನೇತೃತ್ವದಲ್ಲಿ ಕತಾರ್ಗೆ ಕೊಂಡೊಯ್ಯಲಾಗುತ್ತಿದೆ.
ತಿರುವನಂತಪುರದಲ್ಲಿ ಕೇರಳ ಲೋಕೋಪ ಯೋಗಿ ಹಾಗೂ ಪ್ರವಾಸ ಇಲಾಖೆಯ ಸಚಿವರಾದ ಪಿ.ಎ. ಮಹಮ್ಮದ್ ಇಲ್ಯಾಸ್ ಅವರು ಯಾತ್ರೆಗೆ ಚಾಲನೆ ನೀಡಿದ್ದಾರೆ.
ಚಿನ್ನದ ಮೂರ್ತಿ ಡಿ. ಒಂದರಂದು ಮಂಗಳೂರಿಗೆ ಆಗಮಿಸಿದೆ. ಡಿ. 2ರಂದು ಸಂತ ಅಲೋಶಿಯಸ್ ಕಾಲೇಜಿಗೆ ಯಾತ್ರೆ ಆಗಮಿಸಲಿದ್ದು, ಬಳಿಕ ಮಣಿಪಾಲ, ಭಟ್ಕಳ ಮೂಲಕ ಗೋವಾಕ್ಕೆ ತೆರಳಲಿದೆ.
ಜಾಗೃತಿಗಾಗಿ ಯಾತ್ರೆ
ಮಾದಕದ್ರವ್ಯ ವಿರುದ್ಧ ನಡೆಸುವ ಹೋರಾಟ ಕ್ಕಾಗಿ ಬೋಚೆಯವರು ಚಿನ್ನದ ಮೂರ್ತಿಯ ಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಎಲ್ಲ ಶಾಲೆ ಕಾಲೇಜುಗಳಲ್ಲಿ ಈ ಬಗ್ಗೆ ಜಾಗೃತಿ ನಡೆಸುವ ಕಾರ್ಯಕ್ರಮ ಇದಾಗಿದೆ. ಹೀಗಾಗಿ ದ.ಕ. ಜಿಲ್ಲಾ ಫುಟ್ಬಾಲ್ ಸಂಸ್ಥೆಯ ವತಿಯಿಂದ ಡಿ. 1ರಂದು ನೆಹರೂ ಮೈದಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಭಾಗ ವಹಿಸಿದವರು ಲಕ್ಕಿ ಡ್ರಾ ಮೂಲಕ ಕತಾರ್ಗೆ ಪ್ರಯಾಣ ಮಾಡುವ ವಿಮಾನದ ಟಿಕೆಟ್ ಮತ್ತು ವಿಶ್ವಕಪ್ ಪಂದ್ಯ ವೀಕ್ಷಿಸಲು ಪಾಸ್ ಪಡೆಯುವ ಅವಕಾಶ ಇದೆ ಎಂದು ದ.ಕ. ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಡಿ.ಎಂ. ಅಸ್ಲಾಂ ತಿಳಿಸಿದ್ದಾರೆ.