ಕಾರ್ಕಳ, ಡಿ. 01 (DaijiworldNews/SM): ತಾಲೂಕಿನ ಸೂಡಾದಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ಕಲ್ಲು ಗಣಿಗಾರಿಕೆಗೆ ಬೆಂಗಳೂರು ಗಣಿ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ.
ಸಾಂದರ್ಭಿಕ ಚಿತ್ರ
ಬೆಂಗಳೂರಿನಿಂದ ಕಾರಿನಲ್ಲಿ ಬಂದ ತಂಡವು ನಿರಂತರ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದೆ. ಕೇವಲ ಒಂದು ಎಕರೆಗೆ ಮಾತ್ರ ಗಣಿ ಇಲಾಖೆಯಿಂದ ಲೀಸ್ ಪಡೆದಿದ್ದು, 5ರಿಂದ 6 ಎಕರೆ ಪ್ರದೇಶದಲ್ಲಿ ಅಕ್ರಮವಾಗಿ ಗಣಿ ಲೂಟಿ ನಡೆಸಲಾಗುತ್ತಿದೆ. ದಿನಕ್ಕೆ 700 ಲೋಡ್ಗಳಷ್ಟು ಕಲ್ಲುಗಳು ಯಾವುದೇ ಪರವಾನಿಗೆ ಇಲ್ಲದೆ ಸಾಗಾಟ ಮಾಡಲಾಗುತ್ತಿದೆ. ಇತ್ತೀಚೆಗೆ ಅಹೋರಾತ್ರಿ ಸಮುದ್ರಕ್ಕೆ ಕಲ್ಲು ಹಾಕುವ ದಂಧೆಯು ನಡೆಸಲಾಗುತ್ತಿದ್ದು, ಅದಿರು ಲಾರಿಗಳ ಆರ್ಭಟದಿಂದ ಕಾರ್ಕಳ-ಪಡುಬಿದ್ರಿ ರಸ್ತೆಯಲ್ಲಿ ಜೀವದ ಹಂಗು ತೊರೆದು ಪ್ರಯಾಣಿಕರು ಓಡಾಡುವ ಪರಿಸ್ಥಿತಿಯಿದೆ.
ಅದೇ ಕಾರಣಕ್ಕೆ ಬೆಂಗಳೂರಿನ ಗಣಿ ಇಲಾಖೆಯ ಅಧಿಕಾರಿಗಳು ಅಕ್ರಮ ಕಲ್ಲುಕೋರೆಗೆ ದಾಳಿ ನಡೆಸಿ ಮಾಹಿತಿ ಪಡೆದುಕೊಂಡು, ವಿಡಿಯೋ ಚಿತ್ರೀಕರಣ ನಡೆಸಿ ವಾಪಾಸ್ಸಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.