ಉಳ್ಳಾಲ, ಡಿ 01 (DaijiworldNews/MS): ಕೆಲಸಕ್ಕೆಂದು ಹೋದ ತೊಕ್ಕೊಟ್ಟು ಭಟ್ನಗರದ ಬಾಡಿಗೆ ಮನೆ ನಿವಾಸಿ ಶ್ಯಾಮ್ (42) ಎಂಬವರು ನಾಪತ್ತೆಯಾಗಿರುವ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೈಂಟಿಂಗ್ ವೃತ್ತಿ ನಡೆಸುತ್ತಿದ್ದ ಶ್ಯಾಮ್, ನ.9ರಂದು ಕೆಲಸಕ್ಕೆಂದು ಮನೆಯಿಂದ ಹೊರಟವರು ನಾಪತ್ತೆಯಾಗಿದ್ದಾರೆ. ತೆಲುಗು, ತುಳು, ಕನ್ನಡ, ಹಿಂದಿ, ಇಂಗ್ಲೀಷ್ , ತಮಿಳು, ಮಲಯಾಳಂ ಭಾಷೆಯನ್ನು ತಿಳಿದಿದ್ದಾರೆ. ಈ ಬಗ್ಗೆ ಪತ್ನಿ ಭವ್ಯ ಎಸ್. ಎಂಬವರು ನೀಡಿರುವ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಕಾಣೆಯಾದವರು ಎಲ್ಲಿಯಾದರೂ ಪತ್ತೆಯಾದಲ್ಲಿ ಮಂಗಳೂರು ಪೊಲೀಸ್ ಕಂಟ್ರೋಲ್ ರೂಂ ಅಥವಾ ಉಳ್ಳಾಲ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.