ಕಾರ್ಕಳ, ಡಿ 01 (DaijiworldNews/MS): ಒಬ್ಬ ವ್ಯಕ್ತಿ ಹಲವು ಕ್ಷೇತ್ರಗಳಿಗೆ ತೊಡಗಿಸಿಕೊಂಡು ಸತ್ಕಾರ್ಯದ ನಡೆಸುವ ಮೂಲಕ ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಿ ಗುರುತಿಸಿಸಲು ಸಾಧ್ಯವಾಗುತ್ತದೆ. ಅಂತಹ ವ್ಯಕ್ತಿತ್ವವನ್ನು ಕಾರ್ಕಳ ಪುರಸಭೆಯ ಮಾಜಿ ಅಧ್ಯಕ್ಷ ಕೆ.ಪಿ.ಪ್ರದೀಪ್ ಕೋಟ್ಯಾನ್ ಹೊಂದಿದ್ದರು ಎಂದು ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದರು.
ಪುರಸಭಾ ಮಾಜಿ ಅಧ್ಯಕ್ಷ ನೆಕ್ಲಾಜೆಗುತ್ತು ಕೆ.ಪಿ. ಪ್ರದೀಪ್ ಕೋಟ್ಯಾನ್ ಸ್ಮಾರಕ ಉದ್ಯಾನವ ಹಾಗೂ ಕಂಚಿನ ಪುತ್ಥಳಿ ಅನಾವರಣಗೊಳಿಸಿ , ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಕಳದ ರಾಜಕೀಯ ರಂಗಕ್ಕೆ ಪ್ರವೇಶಿಸಿದ ಪ್ರದೀಪ್ ಕೋಟ್ಯಾನ್, ಘಟಾನುಘಟಿಯ ಮುಂದೆ ಸ್ವರ್ಧಿಸಿ ಗೆಲುವು ಸಾಧಿಸುವ ಮೂಲಕ ಪುರಸಭಾ ಸದಸ್ಯರಾಗಿ, ಪುರಸಭಾ ಅಧ್ಯಕ್ಷರಾಗಿ ಆನಂತರದ ದಿನಗಳಲ್ಲಿ ಎಪಿಎಂಸಿ ಅಧ್ಯಕ್ಷರಾಗಿ ಜನನುರಾಗಿದ್ದರು. ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿದರಲ್ಲದೇ ಯಕ್ಷಗಾನ, ಕಂಬಳ ಪ್ರೇಮಿಯೂ ಆಗಿದ್ದರು. ಯುವಶಕ್ತಿಯನ್ನು ಕಟ್ಟಿ ಬೆಳೆಸಿದಲ್ಲದೇ ಯುವ ಶಕ್ತಿ ವಿದ್ಯಾ ಸಂಸ್ಥೆ ಹುಟ್ಟು ಹಾಕಿ ಅದರ ಏಳಿಗೆಗಾಗಿ ಶ್ರಮಿಸಿದರು. ಅವರ ಕನಸ್ಸಿ ಉದ್ಯಾವದ ಅಭಿವೃದ್ಧಿಗೆ ಅಗತ್ಯವಾದ ಇನ್ನಷ್ಟು ಅನುದಾನ ಬಿಡುಗಡೆಗೊಳಿಸುವ ಭರವಸೆ ನೀಡಿದರು.
ಕಾರ್ಕಳ ಪುರಸಭೆಯ ಪತಿಪಕ್ಷ ಮುಖಂಡ ಅಶ್ಪಕ್ ಅಹಮ್ಮದ್ ಮಾತನಾಡಿ, ಶಾಂತಿ ಸಹನೆ,ಸಹಬಾಳ್ವೆಯ ವ್ಯಕ್ತಿಯನ್ನು ಕೆದಕಿದರೆ ಸಮಾಜದಲ್ಲಿ ಯಾವೆಲ್ಲ ರೀತಿಯಲ್ಲಿ ಬದಲಾವಣೆಯನ್ನು ಕಾಣಬಹುದು ಎಂಬುವುದಕ್ಕೆ ಪ್ರದೀಪ್ ಕೋಟ್ಯಾನ್ ಉತ್ತಮ ಉದಾಹರಣೆಯಾಗಿದ್ದಾರೆ. ಮೂವತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯಾರಾಗಿದ್ದ ಅವರನ್ನು ಕಡೆಗಣಿಸಿ ಹೊಸತಾಗಿ ಪಕ್ಷಕ್ಕೆ ಬಂದಿದ್ದ ವ್ಯಕ್ತಿಯನ್ನು ಪುರಸಭಾ ಅಧ್ಯಕ್ಷರನ್ನಾಗಿ ಪಕ್ಷದ ಮುಖಂಡರು ಕೈಗೊಂಡ ಆತುರದ ನಿರ್ಧಾರವೇ ಕಾರ್ಕಳದ ರಾಜಕೀಯ ಬದಲಾವಣಿಗೆ ಕಾರಣವಾಗಿತ್ತು ಎಂದು ಇದೇ ಸಂದರ್ಭದಲ್ಲಿ ನೆನಪಿಸಿಕೊಂಡರು.
ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್( ರಿ), ಬೆಂಗಳೂರು ಇದರ ರಾಜ್ಯಾಧ್ಯಕ್ಷ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಮಾತನಾಡಿ, ವ್ಯಕ್ತಿ ಜೀವಿತಾವಧಿಯಲ್ಲಿ ಮಾಡಿದ ಸೇವೆಯು ಅವರ ಕಾಲಾವಧಿಯ ನಂತರವು ಅದನ್ನು ನೆನಪಿಸಿಕೊಳ್ಳುವಂತಾಗಬೇಕು. ಅಂತಹ ಅದರ್ಶಪ್ರಾಯ ವ್ಯಕ್ತಿತ್ವವು ಪ್ರದೀಪ್ ಕೋಟ್ಯಾನ್ ಅವರಲ್ಲೂ ಇತ್ತು. ಅವರ ಕತೃತ್ವ ಶಕ್ತಿ ನಮಗೆ ಮಾದರಿಯಾಗಿದೆ. ಪಕ್ಷ-ಭೇದ ಮಾಡದೇ ಉತಮ ಕೆಲಸ ಮಾಡಿದ್ದಾರೆ. ಅವರ ಕನಸ್ಸಿನ ಕೂಸು ಇದೇ ಉದ್ಯಾನದಲ್ಲಿ ಅವರ ಕಂಚಿನ ಪ್ರತಿಮೆ ಅನಾವರಣ ಗೊಂಡಿರುವುದು ಮುಂದಿನ ಪೀಳಿಗೆ ಮಾದರಿಯಾಗಲಿ ಎಂದರು.
ಹಿರಿಯ ವಕೀಲ ಎಂ.ಕೆ.ವಿಜಯಕುಮಾರ್, ಪಟ್ಲ ಸತೀಶ್ ಶೆಟ್ಟಿ, ಕಾರ್ಕಳ ಪುರಸಭೆ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಸಂದಭೋಚಿತವಾಗಿ ಮಾತನಾಡಿದರು.
ಕಾರ್ಕಳ ಪುರಸಭೆ ಅಧ್ಯಕ್ಷೆ ಸುಮಾ ಕೇಶವ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪುರಸಭೆ ಸದಸ್ಯ ಕೆ ಪಿ ಪ್ರಶಾಂತ್ ಕೋಟ್ಯಾನ್ ಯುವಶಕ್ತಿ ಎಜುಕೇಶನ್ ಸೊಸೈಟಿ ಗೌರವಾಧ್ಯಕ್ಷ ನರಸಿಂಹ ಪುರಾಣಿಕ್, ಯುವಶಕ್ತಿ ಎಜುಕೇಷನ್ ಸೊಸೈಟಿಯ ಸಂಚಾಲಕ ಅಬ್ದುಲ್ ಖಾಲಿಕ್, ಪ್ರವೀಣ್ ಕೋಟ್ಯಾನ್, ಪ್ರಕಾಶ್ ಕೋಟ್ಯಾನ್, ಸುರೇಖಾ ಪ್ರದೀಪ್ ಕೋಟ್ಯಾನ್ ಉಪಸ್ಥಿತರಿದ್ದರು.
ಪ್ರಮೀಳಾ ಪ್ರಸಾದ್ಕೋಟ್ಯಾನ್ ಸ್ವಾಗತಿಸಿದರು. ಅನನ್ಯ ಭಟ್ ಪ್ರಾರ್ಥಿನೆಗೈದರು. ವಸಂತ ಪೂಜಾರಿ ನಿರೂಪಿಸಿದರು. ಪ್ರಖ್ಯಾತ್ ಕೋಟ್ಯಾನ್ ಧನ್ಯವಾದ ನೀಡಿದರು.
ಸುನೀಲ್ ಕುಮಾರ್ ರಾಜಕೀಯ ಎಂಟ್ರಿಗೆ ಇವರೇ ಕಾರಣ
ಬಜರಂಗದಳ ರಾಜ್ಯ ಸಂಚಾಲಕರಾಗಿದ್ದ ಸುನೀಲ್ಕುಮಾರ್ ಅವರನ್ನು ರಾಜಕೀಯ ಪ್ರವೇಶಕ್ಕೆ ಪ್ರದೀಪ್ ಕೋಟ್ಯಾನ್ ಅವರ ಪಾತ್ರ ಮಹತ್ವದಾಗಿತ್ತು. ಪುರಸಭಾ ಅಧ್ಯಕ್ಷಗಾದಿಗೆ ತನ್ನ ಹೆಸರು ಕೈ ತಪ್ಪಿದ ಅಸಮಾಧಾನ ಪ್ರದೀಪ್ ಅವರ ಮನಬೇನೆಗೆ ಕಾರಣವಾಗಿತ್ತು. ಎರಡನೇ ಅವಧಿಯಲ್ಲಿ ಪ್ರದೀಫ್ ಕೋಟ್ಯಾನ್ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷಗಾದಿಗೆ ಆಯ್ಕೆಯಾದರೂ, ಸೋದರಳಿ ಸುನೀಲ್ ಕುಮಾರ್ ಅವರನ್ನು ರಾಜಕೀಯ ರಂಗಕ್ಕೆ ಪ್ರವೇಶಿಸುವಂತೆ ಮಾಡಿ, ಬಿಜೆಪಿಯ ಅಭ್ಯಥಿಯಾಗಿ ಚುನಾವಣಾ ಕಣಕ್ಕೆ ಇಳಿಸುವಂತೆ ಮಾಡಿದರಲ್ಲದೇ ಕಾಂಗ್ರೆಸ್ಗೆ ಕೈಕೊಟ್ಟರು.