ಮಂಗಳೂರು, ನ 29 (DaijiworldNews/SM): ಬಿಜೆಪಿ ಸರ್ಕಾರ ಆಡಳಿತ ನಡೆಸಲು ಸಂಪೂರ್ಣ ವಿಫಲವಾಗಿದೆ. ಕರಾವಳಿ ಜಿಲ್ಲೆಯಲ್ಲಿ ಕಾನೂನು ವೈಫಲ್ಯವಾಗಿದೆ ಎಂದು ಮಾಜಿ ಶಾಸಕ ಜೆ.ಆರ್. ಲೋಬೋ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಡೆಯುತ್ತಿರುವ ಕೊಲೆಗಳನ್ನು ಬಳಸಿ ಬಿಜೆಪಿ ಕರಾವಳಿಯಲ್ಲಿ ರಾಜಕೀಯ ಮಾಡುತ್ತಿದೆ. ಆ ಮೂಲಕ ಸಮುದಾಯಗಳನ್ನು ಒಡೆಯುವ ಕೆಲಸ ಮಾಡುತ್ತಿದೆ. ಜನರು ಶಾಂತಿ ಸುವ್ಯವಸ್ಥೆಯಿಂದಿರುವುದು ಬಿಜೆಪಿಗೆ ಬೇಕಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗೋಡೆ ಬರಹ ಬರೆದ ಶಾರೀಕ್ ಸುತ್ತಾಡಿಕೊಂಡಿರುವಾಗ ನಮ್ಮ ಕಾನೂನು ಎಲ್ಲಿತ್ತು. ಎಲ್ಲಾ ಧರ್ಮಗಳಲ್ಲಿ ಕ್ರಿಮಿನಲ್ಗಳು ಇದ್ದಾರೆ. ಆದರೆ, ಇಡೀ ಸಮುದಾಯವನ್ನು ಎತ್ತಿಕಟ್ಟುವುದು ಸರಿಯಲ್ಲ ಎಂದು ಮಂಗಳೂರಿನಲ್ಲಿ ಮಾಜಿ ಶಾಸಕ ಜೆ.ಆರ್. ಲೋಬೊ ವಾಗ್ದಾಳಿ ನಡೆಸಿದ್ದಾರೆ.