ಬೆಂಗಳೂರು ಅ 31: ರಿಯಲ್ ಸ್ಟಾರ್ ಉಪೇಂದ್ರ ಅವರ ರಾಜಕೀಯ ಪಕ್ಷದ ಹೆಸರು ಪ್ರಕಟವಾಗಿದೆ. ನಟ ಉಪೇಂದ್ರ ಇದೀಗ ಅವರ ಹೊಸ ಪಕ್ಷಕ್ಕೆ 'ಕರ್ನಾಟಕ ಪ್ರಜ್ಞಾವಂತ ಪಕ್ಷ' ಎಂದು ನಾಮಕರಣ ಮಾಡಿದ್ದಾರೆ. ರಾಜಕೀಯ ಬೇಡ ..ಪ್ರಜಾಕೀಯ ಮಾಡೋಣ ಎಂದು ಹೇಳುತ್ತಾ ಬಂದಿರುವ ಉಪ್ಪಿ ನಟನೆಯಲ್ಲಿ ತನ್ನ ಕಮಾಲ್ ಮಾಡಿದಂತೆ ರಾಜಕೀಯ ಕ್ಷೇತ್ರದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಬೆಂಗಳೂರಿನ ಗಾಂಧಿನಗರದಲ್ಲಿ ಮಂಗಳವಾರ ಪಕ್ಷದ ಹೆಸರು ಫೋಷಣೆ ಮಾಡಿದ ಬಳಿಕ ಮಾತನಾಡಿದ ನಟ ಉಪೇಂದ್ರ.ನಾನೊಂದು ವೇದಿಕೆಯನ್ನಷ್ಟೇ ನಿರ್ಮಾಣ ಮಾಡಿದ್ದೇನೆ. ಈ ಪಕ್ಷದಲ್ಲಿ ಯಾರು ಪ್ರಮುಖರಲ್ಲ ಎಲ್ಲರೂ ಸಮಾನರೂ. ಕೃಷಿ, ಶಿಕ್ಷಣ ಎಲ್ಲಾ ಕ್ಷೇತ್ರದಲ್ಲೂ ಬದಲಾವಣೆ ತರಬೇಕಾಗಿದೆ.ಎಂದರು. ರಾಜಕೀಯದಲ್ಲಿ ಎಲ್ಲರೂ ಶತ್ರುಗಳು ಅದರೆ ಪ್ರಜಾಕೀಯದಲ್ಲಿ ಎಲ್ಲರೂ ಮಿತ್ರಗಳು. ಇದಕ್ಕಾಗಿಯೇ "ಪ್ರಜಾಕೀಯ" ಎನ್ನುವ ಆಪ್ ರೆಡಿ ಮಾಡಿದ್ದೇವೆ..ಪಕ್ಷಕ್ಕೆ ಸಂಬಂಧಪಟ್ಟ ಎಲ್ಲಾ ಮಾಹಿತಿ ಇದರಲ್ಲಿ ಜನರಿಗೆ ನೆರವಾಗಿ ಸಿಗಲಿದೆ ಎಂದರು. ಜತೆಗೆ ನವೆಂಬರ್ ೧೦ ಕ್ಕೆ ವೆಬ್ ಸೈಟ್ ಕೂಡಾ ಲಾಂಚ್ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದರು.