ಕಾಸರಗೋಡು, ನ 29 (DaijiworldNews/MS): ಮೋಟಾರ್ ಪಂಪ್ ನಿಂದ ಶಾಕ್ ತಗಲಿ ವಿದ್ಯಾರ್ಥಿಯೋರ್ವ ಮೃತಪಟ್ಟ ದಾರುಣ ಘಟನೆ ಪೆರ್ಲ ಸಮೀಪದ ಸಾಯದಲ್ಲಿ ನಡೆದಿದೆ.
ಕಾಟುಕುಕ್ಕೆ ಹಯರ್ ಸೆಕೆಂಡರಿ ಶಾಲೆಯ ಪ್ಲಸ್ ವನ್ ವಿದ್ಯಾರ್ಥಿ ಜಿತೇಶ್ (17) ಮೃತಪಟ್ಟ ವಿದ್ಯಾರ್ಥಿಯಾಗಿದ್ದಾನೆ.
ಸಾಯ ಗುಳಿಗೆಮೊಲೆಯಲ್ಲಿರುವ ಮನೆ ಸಮೀಪ ಪಂಪ್ ಶೆಡ್ ನಲ್ಲಿ ಘಟನೆ ನಡೆದಿದೆ. ಮೋಟಾರ್ ಪಂಪ್ ಆಫ್ ಮಾಡಲು ತೆರಳಿದ್ದ ಸಂದರ್ಭದಲ್ಲಿ ವಿದ್ಯುತ್ ಶಾಕ್ ತಗಲಿದೆ. ಮನೆಯವರು ಹಾಗೂ ಸ್ಥಳೀಯರು ವಿಟ್ಲದ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಳಿಲ್ಲ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.