ಕಾರ್ಕಳ, ಫೆ 26(SM): ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರಾಯೋಜಕತ್ವದಲ್ಲಿ ಭಯೋತ್ಪಾದನೆ ಎಲ್ಲೆ ಮೀರಿದೆ. ಕಳೆದ ೧೨ದಿನಗಳ ಹಿಂದೆ ೪೧ ಮಂದಿ ಸೈನಿಕರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತಿಯಾಗಿ ಪಾಕ್ ಅಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೈನ್ಯ ಪ್ರತಿದಾಳಿ ನಡೆಸಿ ೩೦೦ಕ್ಕೂ ಮಿಕ್ಕಿ ಭಯೋತ್ಪಾದಕರನ್ನು ಕೊಂದು ಹಾಕಿದೆ.
ಭಾರತ ಸೈನ್ಯ ನಡೆಸಿರುವ ಕಾರ್ಯಾಚರಣೆಯನ್ನು ಬಜರಂಗದಳ ಕಾರ್ಯಕರ್ತರು ಸಂಭ್ರಮಿಸಿದರು. ಭಾರತಾಂಬೆಯನ್ನು ನಮಿಸಿ ಪಾಕಿಸ್ತಾನದ ರಾಷ್ಟ್ರಕ್ಕೆ ಬೆಂಕಿ ಹಾಕಿ ಪಾಕಿಸ್ತಾನ ವಿರುದ್ಧ ಘೋಷಣೆ ಕೂಗಿದರು. ಭಾರತೀಯ ಸೈನ್ಯ ಅತ್ಯುತ್ತಮ ಕಾರ್ಯ ನಡೆಸಿದ್ದು, ಮುಂದೆಯೂ ಉಗ್ರರನ್ನು ಸದೆಬಡಿಯಲು ಭಗವಂತ ಸೈನಿಕರಿಗೆ ಕೃಪಾಶೀರ್ವಾದ ಕರುಣಿಸಲಿ ಎಂದು ಕಾರ್ಯಕರ್ತರು ಪ್ರಾರ್ಥಿಸಿದರು.
ಇನ್ನು ಭಾರತೀಯ ಸೇನೆ ಪಾಕಿಸ್ತಾನಕ್ಕೆ ನೀಡಿರುವ ತಕ್ಕ ಉತ್ತರಕ್ಕೆ ಇದೀಗ ಎಲ್ಲೆಡೆ ಪ್ರಶಂಸೆಗಳು ಕೇಳಿಬರುತ್ತಿವೆ.