ಮಂಗಳೂರು, ನ 29 (DaijiworldNews/MS): ಸುರತ್ಕಲ್ ಎನ್ ಐ ಟಿಕೆ ಬಳಿ ಸುಂಕ ಸಂಗ್ರಹ ಕೇಂದ್ರಕ್ಕೆ ಸಂಬಂಧಿಸಿದಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆ ನಿರ್ದೇಶಕರ ಪತ್ರದ ಆಧಾರದಲ್ಲಿ ಡಿಸೆಂಬರ್ 1ರಿಂದ ಟೋಲ್ ಕೇಂದ್ರದಲ್ಲಿ ಸುಂಕ ಸಂಗ್ರಹ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ರವಿ ಕುಮಾರ್ ಎಂ ಆರ್ ತಿಳಿಸಿದ್ದಾರೆ.
ನ.30 ರ ಮಧ್ಯರಾತ್ರಿ ಗಂಟೆಗೆ ಇದು ಜಾರಿಗೆ ಬರಲಿದ್ದು ಸಾರ್ವಜನಿಕರು ಸುರತ್ಕಲ್ ಟೋಲನ್ನು ಯಾವುದೇ ಸುಂಕ ಪಾವತಿಸದೆ ದಾಟಬಹುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಇನ್ನೊಂದೆಡೆ ನಿರೀಕ್ಷೆಯಂತೆ ಹೆಜಮಾಡಿಯಲ್ಲಿ ಟೋಲ್ ಮೊತ್ತ ದುಬಾರಿಯಾಗಲಿದೆ.