ಬೆಳ್ತಂಗಡಿ, ನ 28 (DaijiworldNews/SM): ರಬ್ಬರ್ಗೆ ಬಳಸುವ ಆ್ಯಸಿಡ್ ಕುಡಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಪುದುವೆಟ್ಟು ಗ್ರಾಮದಲ್ಲಿ ನಡೆದಿದೆ. ಪುದುವೆಟ್ಟು ಗ್ರಾಮದ ಮೇರ್ಲ ನಿವಾಸಿ ಬಿಂದು(48) ಆತ್ಮಹತ್ಯೆ ಮಾಡಿಕೊಂಡವರು. ಮೃತರು ಪುದುವೆಟ್ಟು ಗ್ರಾಮದ ಮೇರ್ಲ ನಿವಾಸಿ ರವಿ ಎಂಬವರ ಪತ್ನಿಯಾಗಿದ್ದಾರೆ.
ನ.27 ರಂದು ರಬ್ಬರ್ಗೆ ಬಳಸುವ ಆ್ಯಸಿಡ್ ಕುಡಿದು ತೀವ್ರ ಅಸ್ವಸ್ಥರಾಗಿದ್ದರು. ಕೂಡಲೇ ಇವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಆ್ಯಸಿಡ್ ಕುಡಿಯಲು ಕಾರಣವೇನೆಂಬುದು ಇನ್ನಷ್ಟೆ ತಿಳಿದುಬರಬೇಕಾಗಿದೆ.