ಬಂಟ್ವಾಳ, ನ 28 (DaijiworldNews/SM): ಅಪ್ರಾಪ್ತ ವಯಸ್ಸಿನ ಬಾಲಕಿಗೆ ವಾಹನ ಚಲಾಯಿಸಲು ನೀಡಿ ಅಪಘಾತ ಸಂಭವಿಸಿದ ಕಾರಣಕ್ಕಾಗಿ ವಾಹನ ಮಾಲಕರಿಗೆ ನ್ಯಾಯಾಲಯ ಸಾವಿರಾರು ರೂ ದಂಡ ವಿಧಿಸಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಕಾನೂನು ಬಾಹಿರವಾಗಿ ಬಾಲಕಿಗೆ ವಾಹನ ಚಲಾಯಿಸಲು ನೀಡಿದ ಕಾರಣಕ್ಕಾಗಿ ಬಂಟ್ವಾಳ ನ್ಯಾಯಾಲಯ ರೂ. 26 ಸಾವಿರ ದಂಡ ವಿಧಿಸಿದೆ. ಸಿದ್ದಕಟ್ಟೆ ಎಂಬಲ್ಲಿ ಸ್ಕೂಟರ್ ಹಾಗೂ ಕಾರಿನ ಮಧ್ಯೆ ಅಪಘಾತ ಸಂಭವಿಸಿ ಸ್ಕೂಟರ್ ಚಲಾಯಿಸುತ್ತಿದ್ದ ಅಪ್ರಾಪ್ತ ಬಾಲಕಿಗೆ ಗಾಯವಾಗಿತ್ತು. ಕಾರು ಚಾಲಕನ ದುಡುಕುತನದ ಚಾಲನೆಯಿಂದ ಬಾಲಕಿ ಚಲಾಯಿಸುತ್ತಿದ್ದ ವಾಹನಕ್ಕೆ ಡಿಕ್ಕಿಯಾಗಿ ಗಾಯವುಂಟಾಗಿತ್ತು.
ಅಪ್ರಾಪ್ತ ಬಾಲಕಿ ದ್ವಿಚಕ್ರ ವಾಹನ ಚಲಾಯಿಸಿ ಅಪಘಾತ ಸಂಭವಿಸಿದ ಕಾರಣಕ್ಕಾಗಿ ಮೆಲ್ಕಾರ್ ಟ್ರಾಫಿಕ್ ಪೋಲಿಸರು ನೋಟೀಸ್ ಜಾರಿ ಮಾಡಿದ್ದರು. ಅಗಸ್ಟ್ ತಿಂಗಳಿನಲ್ಲಿ ಸಿದ್ದಕಟ್ಟೆಯಲ್ಲಿ ಟ್ರಾಫಿಕ್ ಪೋಲಿಸರು ನೋಟೀಸ್ ನೀಡಿದ್ದು, ಇದೀಗ ನ್ಯಾಯಾಲಯ ಬಾಲಕನ ತಾಯಿ ಯಶೋಧ ಅವರಿಗೆ ದಂಡ ಕಟ್ಟುವಂತೆ ನೋಟೀಸ್ ಜಾರಿ ಮಾಡಿದೆ. ಟ್ರಾಫಿಕ್ ಎ.ಎಸ್.ಐ.ವಿಜಯ ಅವರು ಪ್ರಕರಣ ದ ತನಿಖಾಧಿಕಾರಿಯಾಗಿದ್ದರು.