ಉಡುಪಿ, ನ 28 (DaijiworldNews/MS): ಕರಾವಳಿಯಲ್ಲಿ ನಡೆಯುತ್ತಿರುವ ಉಗ್ರಕೃತ್ಯಗಳು, ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟದ ವೇಳೆ ಗೊತ್ತಾಗಿದ್ದು, ಹೀಗಾಗಿ ಕರಾವಳಿ ಭಾಗದ ಜನರು ಸದಾ ಜಾಗೃತರಾಗಿರಬೇಕು ಎಂದು ಪೇಜಾವರ ಶ್ರೀ ವಿಶ್ಚಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಕರಾವಳಿ ಜನರು ಸಂದೇಹಾಸ್ಪದ ಚಟುವಟಿಕೆ ಕಂಡ ಕೂಡಲೇ ಜಾಗೃತರಾಗಬೇಕು. ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಬೇಕು. ಉತ್ಥಾನ ದ್ವಾದಶಿ ಬಳಿಕ ಯಕ್ಷಗಾನ, ಕೋಲ, ಉತ್ಸವ, ಕಂಬಳ, ದೀಪೋತ್ಸವ, ನಾಗಮಂಡಲದಂತಹ ಹಲವಾರು ಉತ್ಸವ ನಡೆಯುತ್ತೆ. ಜನಸಂದಣಿ ಹೆಚ್ಚಿರುವ ಸಮಾರಂಭ ನಡೆಯುತ್ತೆ.ಇಂತಹ ಸ್ಥಳಗಳಲ್ಲಿ ಅನಾಹುತ ನಡೆದಲ್ಲಿ ಸಮಾಜಕ್ಕೆ ದೊಡ್ಡ ಹಾನಿ. ಪ್ರತಿಯೊಬ್ಬರೂ ಈ ಬಗ್ಗೆ ಸದಾ ಜಾಗೃತರಾಗಿಬೇಕು ಎಂದು ಶ್ರೀಗಳು ಎಚ್ಚರಿಸಿದ್ದಾರೆ.
ಹಿಂದೂ ಸಂಕೇತ ಬಳಸಿ ಉಗ್ರ ಕೃತ್ಯ ಮಾಡುವುದು ನೋಡುತ್ತಿದ್ದೇವೆ. ಸಮಾಜದಲ್ಲಿ ದುಷ್ಕೃತ್ಯ ಎಸಗುವವರು ಹಿಂದೂ ಸಮಾಜದ ಮೇಲೆ ಹೇರುವ ನಿಟ್ಟಿನಲ್ಲಿ ಈ ಚಟುವಟಿಕೆ ನಡೆಸುತ್ತಿದ್ದಾರೆ. ಹೀಗಾಗಿಪ್ರತಿಯೊಬ್ಬರೂ ಮೊಬೈಲ್ ಹಾಗೂ ದಾಖಲೆ ಕಳೆದುಹೋದರೆ ಸಂಬಂಧಪಟ್ಟ ಇಲಾಖೆಗೆ ತಕ್ಷಣ ಮಾಹಿತಿ ನೀಡಿ.ಇಲ್ಲವಾದರೆ ಇಂತಹ ಸಂದರ್ಭದಲ್ಲಿ ಸಂದೇಹಕ್ಕೆ ಒಳಗಾಗಬೇಕಾಗುತ್ತೆ ಎಂದು ಹೇಳಿದ್ದಾರೆ.