ಮಂಗಳೂರು, ನ 28 (DaijiworldNews/MS): ಬಸ್ನಲ್ಲಿ ಅನ್ಯ ಮತೀಯ ಸಹಪಾಠಿ ಯುವತಿಯೊಂದಿಗೆ ಒಂದೇ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕದ್ರಿ ಪೊಲೀಸರು ಮೂವರು ಆರೋಪಿಗಳನ್ನಿ ಬಂಧಿಸಿದ್ದಾರೆ.
ಸುರತ್ಕಲ್ನ ಮುತ್ತು, ಪ್ರಕಾಶ್ ಮತ್ತು ಅಸೈಗೋಳಿಯ ರಾಕೇಶ್ ಬಂಧಿತರು.
ನ. 24ರಂದು ಸಂಜೆ ಘಟನೆ ನಡೆದಿದ್ದು, ಕಾರ್ಕಳ-ನಿಟ್ಟೆ ಮಾರ್ಗವಾಗಿ ಮಂಗಳೂರಿಗೆ ಬರುತ್ತಿದ್ದ ಬಸ್ನಲ್ಲಿ ದಿನನಿತ್ಯ ರಶೀಮ್ ಉಮರ್ ಯುವತಿ ಜತೆ ಕುಳಿತುಕೊಂಡು ಪ್ರಯಾಣಿಸುತ್ತಿದ್ದಾನೆ ಎಂದು ಆರೋಪಿಸಿ, ನಂತೂರಿನಲ್ಲಿ ಯುವಕರ ತಂಡ ಬಸ್ನೊಳಗೆ ನುಗ್ಗಿ ಹಲ್ಲೆ ನಡೆಸಿತ್ತು. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.