ಉಳ್ಳಾಲ, ನ 26 (DaijiworldNews/HR): ನಿಟ್ಟೆ ಫಿಸಿಯೋಥೆರಪಿ ಸಂಸ್ಥೆ ಬೆಳ್ಳಿ ಹಬ್ಬ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಫಿಸಿಯೋಥೆರಪಿ ಸಮ್ಮೇಳನ 'ಫಿಸಿಯೋ ಫನೇಸಿಯಾ-2022ನ್ನು ಡಿ 2 ಹಾಗೂ 3ರಂದು ಎರಡು ದಿನಗಳ ಕಾಲ ದೇರಳಕಟ್ಟೆಯ ಜಸ್ಟೀಸ್ ಕೆ.ಎಸ್ ಹೆಗ್ಡೆ ಆಡಿಟೋರಿಯಂನಲ್ಲಿ ಆಯೋಜಿಸಿದೆ ಎಂದು ನಿಟ್ಟೆ ಫಿಸಿಯೋಥೆರಪಿ ಸಂಸ್ಥೆಯ ಪ್ರಾಂಶುಪಾಲ ಹಾಗೂ ಸಮ್ಮೇಳನದ ಸಂಘಟಕ ಡಾ.ದಾನೇಶ್ ಕುಮಾರ್ ಕೆ.ಯು ಹೇಳಿದ್ದಾರೆ.
ಡಿ.1 ರಂದು ಪ್ರಿ ಕಾನ್ಫರೆನ್ಸ್ ವರ್ಕ್ ಶಾಪ್ ಆಯೋಜಿಸಲಾಗಿದೆ. ಕೇರಳ ಆರೋಗ್ಯ ವಿಜ್ಞಾನ ಸಂಸ್ಥೆಯ 60 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಡಿ.2 ಮತ್ತು 3 ರಂದು ನಡೆಯುವ ಸಮ್ಮೇಳನದಲ್ಲಿ 1,400 ವಿದ್ಯಾರ್ಥಿಗಳು ಕೇರಳ ಆರೋಗ್ಯ ವಿಜ್ಞಾನ ಸಂಸ್ಥೆ, ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ಸಂಸ್ಥೆ, ಬೆಂಗಳೂರು ದಯಾನಂದ್ ಸಾಗರ್ ಸ್ವಾಯುತ್ತೆಗೊಳ್ಳಲಿರುವ ವಿಶ್ವವಿದ್ಯಾನಿಲಯ, ಗುಜರಾತಿನ ಸ್ವಾಮಿನಾರಾಯಣ್ ಆರೋಗ್ಯ ವಿಜ್ಞಾನ ಸಂಸ್ಥೆ, ಸಿ.ಎಂ ಪಟೇಲ್ ಆರೋಗ್ಯ ವಿಜ್ಞಾನಗಳ ವಿ.ವಿ,ಎಂ.ಸಿಆರ್ ವೈದ್ಯಕೀಯ ವಿ.ವಿ ತಮಿಳುನಾಡು, ಪಂಜಾಬ್ ಪಟೇಲ ವಿ.ವಿ , ಮಣಿಪಾಲ ಕೆ.ಎಂ.ಸಿ ವಿ.ವಿಗಳಿಂದ ಫಿಸಿಯೋಥೆರಪಿ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿ ಭಾಗವಹಿಸಲಿದ್ದಾರೆ. ಪಿಲಿಪ್ಪೀನ್, ಹಾಂಗ್ ಕಾಂಗ್, ಬಹರೈನ್ ನಿಂದ ನಾಲ್ಕು ಅಂತರಾಷ್ಟ್ರೀಯ ಸ್ಪೀಕರ್ ಹಾಗೂ ವಿವಿಧ ರಾಜ್ಯಗಳಿಂದ 16 ಸ್ಪೀಕರ್ ಗಳು ಆಗಮಿಸಲಿದ್ದಾರೆ.
ಇನ್ನು ಆರೋಗ್ಯ ವಿಜ್ಞಾನ, ಸಂಶೋಧನಾ, ಕಲಿಕೆಯ ವಿಧಾನ, ಕ್ಲಿನಿಕಲ್ ಪ್ರಾಕ್ಟಿಸ್, ವಿಚಾರಗಳ ಕುರಿತು ಚರ್ಚೆಗಳು ನಡೆಯಲಿದೆ. ಬೆಂಗಳೂರು ಉತ್ತರ ವಿ.ವಿ ಉಪಕುಲಪತಿ ಡಾ.ನಿರಂಜನ್ ವಾನಳ್ಳಿ ಉದ್ಘಾಟಿಸಲಿದ್ದಾರೆ. ನಿಟ್ಟೆ ವಿ.ವಿಯ ಕುಲಾಧಿಪತಿ ಎನ್. ವಿನಯ ಹೆಗ್ಡೆ, ಆಡಳಿತ ವಿಭಾಗದ ಉಪಕುಲಾಧಿಪತಿ ವಿಶಾಲ್ ಹೆಗ್ಡೆ, ಕುಲಪತಿ ಪ್ರೊ.ಸತೀಶ್ ಕುಮಾರ್ ಭಂಡಾರಿ, ಉಪಕುಲಪತಿ ಡಾ.ಎಂ.ಎಸ್ ಮೂಡಿತ್ತಾಯ, ಕುಲಸಚಿವ ಹರ್ಷ ಹಾಲಹಳ್ಳಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭ 310 ವೈಜ್ಞಾನಿಕ ಪ್ರಬಂಧಗಳ ಮಂಡನೆಯಾಗಲಿದ್ದು, ಇದು ಪದವೀಧರರಿಗೆ ಸಂಶೋಧನೆಗೆ ಸಹಕಾರಿಯಾಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಲಿಯಾಳಂ ಸಿನಿಮಾದ ಖ್ಯಾತ ಹಾಡುಗಾರರಾಗಿರುವ ವಿಮಲ್ ರಾಯ್, ತಾನಿಯಾ ಎಲಿಝಬೆತ್ ಮ್ಯಾಥ್ಯು ಮತ್ತು ಶ್ರೇಯ ಎಸ್.ಮೆನನ್ ಹಾಗೂ ಮೂಕಾಂಬಿಕಾ ಚೆಂಡೆ ಬಳಗ ಮತ್ತು ಡಿಜೆ ಜಗತ್ ಇವರ ನೇತೃತ್ವದಲ್ಲಿ ನಡೆಯಲಿದೆ.
ಸಮಾರೋಪ ಸಮಾರಂಭದಲ್ಲಿ ನಿಟ್ಟೆ ಸ್ವಾಯುತ್ತೆಗೊಳ್ಳಲಿರುವ ವಿ.ವಿ ಉಪಕುಲಾಧಿಪತಿ ಡಾ.ಎಂ.ಶಾಂತಾರಮ್ ಶೆಟ್ಟಿ, ನವೋದಯ ಸಮೂಹ ಸಂಸ್ಥೆಗಳ ಕುಲಸಚಿವ ಟಿ.ಶ್ರೀನಿವಾಸ್, ಪದ್ಮಶ್ರೀ ಸಮೂಹ ಸಂಸ್ಥೆಗಳ ಡಾ. ರಾಜೇಶ್ ಶೆಣೈ ಭಾಗವಹಿಸಲಿದ್ದಾರೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಪ್ರೊ.ರಾಕೇಶ್ ಕೃಷ್ಣ ಕೊವೇಲಾ, ಕೃಷ್ಣಪ್ರಸಾದ್ ಕೆ.ಎಂ ಹಾಗೂ ಐಶ್ವರ್ಯ ನಾಯರ್ ಉಪಸ್ಥಿತರಿದ್ದರು.
=========