ಉಡುಪಿ,ನ 26 (DaijiworldNews/MS): ಮುದ್ರಾಲೋನ್ ಯೋಜನೆಯಡಿ ಸಾಲ ನೀಡುವುದಾಗಿ ವ್ಯಕ್ತಿಯೊಬ್ಬರಿಗೆ 2 ಲಕ್ಷ ರೂ.ವರೆಗೆ ವಂಚಿಸಿದ ಘಟನೆ ನಡೆದಿದೆ.
ಸತೀಶ್ ಜೈನ್ ಅವರಿಗೆ ಅಪರಿಚಿತನೊರ್ವ ಮುದ್ರಾ ಲೋನ್ ಸಂಸ್ಥೆಯ ಮ್ಯಾನೇಜರ್ ಎಂದು ಕರೆ ಮಾಡಿ ಮುದ್ರಾ ಲೋನ್ ನೀಡುವುದಾಗಿ ತಿಳಿಸಿದ್ದ. ಲೋನ್ಗೆ ಸಂಬಂಧಿಸಿ ದಾಖಲೆಗಳನ್ನು ಪಡೆದು, ನೋಂದಣಿ ಶುಲ್ಕ 3,200 ರೂ. ಜಮೆ ಮಾಡುವಂತೆ ತಿಳಿಸಿದ್ದ. ಶುಲ್ಕ ಪಾವತಿಸಿದ ಅನಂತರ ಪ್ರೊಸೆಸ್ ಚಾರ್ಜ್, ಇನ್ಸುರೆನ್ಸ್ ಚಾರ್ಜ್, ಎನ್ಒಸಿ, ಆರ್ಬಿಐ ಟ್ಯಾಕ್ಸ್ ಎಂದು ನಂಬಿಸಿ ಹಣ ಕಟ್ಟುವಂತೆ ತಿಳಿಸಿದ್ದ.
ಸತೀಶ್ ಜೈನ್ ಅವರು ನ. 3ರಿಂದ ನ. 11ರ ವರೆಗೆ ಹಂತ-ಹಂತವಾಗಿ ಆರೋಪಿಗಳು ತಿಳಿಸಿದ ವಿವಿಧ ಖಾತೆಗಳಿಗೆ, ಅವರ ಹಾಗೂ ಅವರ ಹೆಂಡತಿಯ ಆಕ್ಯಿಸ್ ಬ್ಯಾಂಕ್ ಕಾರ್ಕಳ ಖಾತೆಯ ಉಳಿತಾಯ ಖಾತೆಯಿಂದ ಇಂಟರ್ನೆಟ್ ಬ್ಯಾಕಿಂಗ್ ಮುಖೇನಾ ಹಂತ ಹಂತವಾಗಿ 2,38,420 ರೂ. ಹಣವನ್ನು ಪಾವತಿಸಿ ವಂಚನೆಗೊಳಗಾಗಿದ್ದಾರೆ. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.