ಕಾಸರಗೋಡು, ನ 25 (DaijiworldNews/SM): ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೀವಾವಧಿ ಶಿಕ್ಷೆಗೊಳಗಾಗಿದ್ದ ಕೈದಿ ಜೈಲಿನಿಂದ ಪರಾರಿಯಾಗಿ ಬಳಿಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವೆಸ್ಟ್ ಎಲೇರಿ ಎಂಬಲ್ಲಿ ನಡೆದಿದೆ.
ವೆಸ್ಟ್ ಎಲೇರಿ ಒಲಯಂಬಾಡಿಯ ವಿ. ಜೆ. ಜೇಮ್ಸ್(58) ಮೃತ ಪಟ್ಟವರು. 2002ರ ಸೆ. 30ರಂದು ತನ್ನ ಪುತ್ರಿ ಜೈಸಾ(12) ಎಂಬಾಕೆ ಯನ್ನು ಆಮಿಷ ತೋರಿಸಿ ಕರೆ ದೊಯ್ದು ಕೊಲೆ ಗೈದು ಮನೆ ಸಮೀಪದ ಕಾಡಿಗೆ ಮೃತದೇಹವನ್ನು ಎಸೆದಿದ್ದರು. ಈ ಬಗ್ಗೆ ತನಿಖೆ ನಡೆಸಿದ್ದ ವೆಳ್ಳ ರಿಕುಂಡು ಪೊಲೀಸರು ಆರೋಪಿ ಯನ್ನು ಬಂಧಿಸಿ ದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2004 ರ ಮಾರ್ಚ್ 20 ರಂದು ಕಾಸರಗೋಡು ಸೆಶನ್ಸ್ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಚಿಮೇನಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಜೇಮ್ಸ್ ಗುರುವಾರ ತಪ್ಪಿಸಿಕೊಂಡಿದ್ದನು. ಈತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಂತೆ ಒಲಯಂಬಾಡಿಯಲ್ಲಿರುವ ಸಹೋದರಿಯ ಮನೆ ಪರಿಸರದ ಹಿತ್ತಿಲಿನಲ್ಲಿ ನೇಣು ಬಿಗಿದು ಮೃತ ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ವೆಳ್ಳ ರಿಕುಂಡು ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.