ಉಡುಪಿ, ನ 25 (DaijiworldNews/MS): ಆಸ್ಪತ್ರೆಯಲ್ಲಿ ಪರೀಕ್ಷೆ ಮುಗಿಸಿಕೊಂಡು ತನ್ನ ಊರಿಗೆ ಹಿಂತಿರುಗುವಾಗ ಹದಗೆಟ್ಟ ರಸ್ತೆಯ ಪರಿಣಾಮ ಹೆರಿಗೆ ನೋವು ಕಾಣಿಸಿಕೊಂಡು, ಮಹಿಳೆಯೋರ್ವಳರು ಆಂಬುಲೆನ್ಸ್ನಲ್ಲಿಯೇ ಐದು ಮಕ್ಕಳಿಗೆ ಜನ್ಮ ನೀಡಬೇಕಾಯಿತು.! ಈ ಪರಿಸ್ಥಿತಿ ಕಂಡು ಪತಿಯೂ , ತನ್ನ ಪತ್ನಿಗೆ ಹೆರಿಗೆ ನೋವಿಗೆ ಕಾರಣವಾದ ಹದಗೆಟ್ಟ ರಸ್ತೆಯನ್ನು ಆಂಬುಲೆನ್ಸ್ ಮುಂದೆ ಹಳಿಯುತ್ತಿರುವುದು ಕಂಡುಬಂತು..ಇಂತಹ ಅಣುಕು ದೃಶ್ಯ ಕಂಡುಬಂದಿದ್ದು ಉಡುಪಿಯ ಇಂದ್ರಾಣಿ ರೈಲು ನಿಲ್ದಾಣದ ಬಳಿ
ಹೀಗೊಂದು ಅಣಕು ಪ್ರದರ್ಶನದ ಮೂಲಕ ವಿನೂತನ ಪ್ರತಿಭಟನೆಯನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಇವರ ನೇತೃತ್ವದಲ್ಲಿ ಜಿಲ್ಲಾ ನಾಗರೀಕ ಸಮಿತಿ ನಡೆಸಿತು.
ಈ ಕುರಿತು ಮಾದ್ಯಮದೊಂದಿಗೆ ನಿತ್ಯಾನಂದ ಒಳಕಾಡು ಮಾತನಾಡಿ, ಸುಮಾರು ಎರಡು ವರ್ಷದಿಂದ ಈ ಸಮಸ್ಯೆ ಭಾದಿಸುತ್ತಿದ್ದರು, ಸಂಬಂಧಪಟ್ಟವರು ಗಮನಹರಿಸುತ್ತಿಲ್ಲ. ಇಂದ್ರಾಣಿ ರೈಲು ನಿಲ್ದಾಣ ಸಂಪರ್ಕಿಸುವ ಜಾರ್ಜ್ ಫೆರ್ನಾಂಡಿಸ್ ರಸ್ತೆ ಹದಗೆಟ್ಟು ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆ ಇಂದು ನಿನ್ನೆಯದಲ್ಲ. ಆದರೂ ಕೂಡ ಈ ಕುರಿತು ಸರಕಾರ ಯಾವುದೇ ಕ್ರಮ ಕೈ ಗೊಳ್ಳದೆ ಇಲ್ಲಿ ನಡೆಯುವ ಅವಘಡಗಳ ಕುರಿತು ಜಾಣ ಕುರುಡಾಗಿದೆ. ಉಡುಪಿಗೆ ರೈಲು ಮಾರ್ಗವಾಗಿ ಸಾಕಷ್ಟು ಜನ ಆಗಮಿಸುತ್ತಾರೆ ಹಾಗೂ ತೆರಳುತ್ತಾರೆ, ಹದಗೆಟ್ಟ ರಸ್ತೆಯ ಮೂಲಕ ಪ್ರಯಾಣಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.ಹಾಗಾಗಿ ಈ ಹದಗೆಟ್ಟ ರಸ್ತೆ ಅಪಘಾತಗಳಿಗೆ ಹಾಗೂ ಹೆರಿಗೆಗೆ ಮಾತ್ರ ಸೀಮಿತವಾಗಿದೆ ಎಂದು ್ ಅಣುಕು ಪ್ರದರ್ಶನ ನಡೆಸಿರುವುದಾಗಿ ತಿಳಿಸಿದರು.
ಟ್ಯಾಕ್ಸಿ ಚಾಲಕರ ಅಧ್ಯಕ್ಷ ವಲೇರಿಯನ್ ಡಿಸೋಜಾ ಮಾತನಾಡಿ, ಈ ರಸ್ತೆಯ ಸಮರ್ಪಕ ದುರಸ್ಥಿ ಕಾರ್ಯದ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಡಾಂಬರು ರೋಡಿಗೆ ಕಾಂಕ್ರೀಟ್ನ ತೇಪೆ ಹಾಕಿ ಮುಚ್ಚಾಲಾಗಿದ್ದು ಈಗ ಡಾಂಬರ್ ಮಾಯವಾಗಿ ಕೇವಲ ಕಾಂಕ್ರೀಟ್ ಉಳಿದಿದೆ. ಜಿಲ್ಲೆಯ ಪ್ರತಿಷ್ಠಿತ ಆಸ್ಪತ್ರೆ ಮಣಿಪಾಲ್, ಧಾರ್ಮಿಕ ಕ್ಷೇತ್ರ ಹಾಗೂ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರು, ವಯೋವೃದ್ಧರು ದೇಶದ ನಾನಾ ಕಡೆಗಳಿಂದ ರೈಲಿನ ಮೂಲಕ ಬಂದು ಇದೇ ಮಾರ್ಗವಾಗಿ ಸಂಚರಿಸಬೇಕಿದೆ. ಆದರೆ ಅವರನ್ನು ಹೊಂಡ ಗುಂಡಿಗಳಿಂದ ತಪ್ಪಿಸಿ ಅವರು ತಲುಪುವ ಸ್ಥಳವನ್ನು ಸೇರಿಸುವುದೇ ಸವಾಲಿನ ಕೆಲಸವಾಗಿದೆ ಎಂದರು.
ಇನ್ನು ನಿತ್ಯ ಈ ಮಾರ್ಗವಾಗಿ ಪ್ರಯಾಣಿಸುವ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು ಹದಗೆಟ್ಟ ರಸ್ತೆಯಿಂದಾಗುವ ಸಮಸ್ಯೆಗಳನ್ನು ತೋಡಿಕೊಂಡರು.ಅಣಕು ಪ್ರದರ್ಶನದಲ್ಲಿ ರಾಜು ಮತ್ತು ಹರೀಶ್ ನಟಿಸಿದರು.ಜಿಲ್ಲಾ ನಾಗರಿಕ ಸಮಿತಿಯ ಸದಸ್ಯರು, ಆಟೋ ಚಾಲಕರು, ಟ್ಯಾಕ್ಸಿ ಚಾಲಕರು ಈ ವಿನೂತನ ಪ್ರತಿಭಟನೆಗೆ ಬೆಂಬಲ ನೀಡಿದರು