ಕಾರ್ಕಳ, ನ 25 (DaijiworldNews/HR): ಕಾರ್ಕಳ, ನ 26 (DaijiworldNews/HR): ಪುರಸಭಾ ಕಚೇರಿಯಲ್ಲಿ ಏರುಧ್ವನಿಯಲ್ಲಿ ಮಾತನಾಡಿ ಬೆದರಿಕೆಯೊಡ್ಡಿದ ಅರ್ಜಿದಾರರೊಬ್ಬರ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಕೇಸುದಾಖಲಾದ ಘಟನೆ ಬೆಳಕಿಗೆ ಬಂದಿದೆ.
ಉಮೇಶ್ ಕಲ್ಲೊಟ್ಟೆ
ಉಮೇಶ್ ಕಲ್ಲೊಟ್ಟೆ(35) ಪ್ರಕರಣದ ಆರೋಪಿ ಅರ್ಜಿದಾರ. ನವಂಬರ್ ೨೪ರಂದು ಈ ಘಟನೆ ಕಾರ್ಕಳ ಪುರಸಭಾ ಕಚೇರಿಯಲ್ಲಿ ನಡೆದಿತ್ತು. ಹಿರಿಯ ಆರೋಗ್ಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಕಳ ಕಸಬಾ ಗ್ರಾಮದ ಸದಾನಂದ ಕಾಮತ್ ರಸ್ತೆಯ ಲೈಲಾ ತೋಮಸ್ (44) ಪ್ರಕರಣದ ದೂರುದಾರರು.
ಕಾರ್ಕಳ ಪುರಸಭಾ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಆಪಾದಿತ ಉಮೇಶ್ ಕಲ್ಲೊಟ್ಟೆ ಪಿರ್ಯಾದಿದಾರರು ಕರ್ತವ್ಯ ನಿರ್ವಹಿಸುತ್ತಿರುವ ಕಛೇರಿಯ ಒಳಗೆ ಬಂದು ಟೇಬಲ್ ಬಳಿ ನಿಂತು ಪಿರ್ಯಾದಿದಾರರಲ್ಲಿ 'ನಾನು ಈ ಹಿಂದೆ ಆಡು ಮತ್ತು ಕುರಿ ಮಾಂಸದ ಅಂಗಡಿ ನಡೆಸಲು ಟ್ರೇಡ್ ಲೈಸೆನ್ಸ್ ಕೋರಿ ಅರ್ಜಿ ಸಲ್ಲಿಸಿದ್ದರೂ ಕೂಡಾ ಈ ವರೆಗೆ ನನಗೆ ಯಾಕೆ ಟ್ರೇಡ್ ಲೈಸೆನ್ಸ್ ನೀಡಿರುವುದಿಲ್ಲ'ಎಂದು ಏರುಧ್ವನಿಯಲ್ಲಿ ಕೇಳಿದ್ದಾರೆ.
ಟ್ರೇಡ್ ಲೈಸೆನ್ಸ್ ನೀಡುವ ಬಗ್ಗೆ ನಮ್ಮ ಮೇಲಾಧಿಕಾರಿಯವರಲ್ಲಿ ಕೇಳುವಂತೆ ಲೈಲಾ ಥೋಮಸ್ ತಿಳಿಸಿದ್ದು ಅದಕ್ಕೆ ಅಸಮಾಧಾನಗೋಂಡ ಉಮೇಶ್ ಕಲ್ಲೊಟ್ಟೆ ಪಿರ್ಯಾದಿದಾರ ಲೈಲಾ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಯೊಡ್ಡಿದ್ದರು.
ಉಮೇಶ್ ಕಲ್ಲೊಟ್ಟೆ ಓರ್ವ ಸಾಮಾಜಿಕ ಕಾರ್ಯಕರ್ತನಾಗಿ ವಿವಿಧ ಇಲಾಖೆಗಳ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಲಾಖಾ ಅಭಿವೃದ್ಧಿ ಕಾರ್ಯಗಳು ಸೇರಿದಂತೆ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ಮಾಹಿತಿ ಹಕ್ಕು ಅಧಿನಿಯಮದಂತೆ ಅರ್ಜಿ ಸಲ್ಲಿಸಿ ಅಧಿಕಾರಿಗಳನ್ನೇ ಇಕ್ಕಟಿಗೆ ಸಿಲುಕಿಸುವಂತೆ ಮಾಡಿದ್ದರು.
ಪುರಸಭಾ ಕಚೇರಿಯಲ್ಲೂ ಹಲವು ಅಗತ್ಯ ಮಾಹಿತಿಗಾಗಿ ಉಮೇಶ್ ಕಲ್ಲೊಟ್ಟೆ ಅರ್ಜೀ ಸಲ್ಲಿಸಿದರೆಂಬ ಮಾಹಿತಿ ಲಭಿಸಿದೆ.