ಮಂಗಳೂರು, ನ 25 (DaijiworldNews/DB): ನಗರದ ಪ್ರಮುಖ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾದ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಹಾಗೂ ತ್ರಿಶಾ ಸಂಧ್ಯಾ ಕಾಲೇಜು ವತಿಯಿಂದ ಲಯನ್ಸ್ ಕ್ಲಬ್ ಕಂಕನಾಡಿ ಹಾಗೂ ಪಡೀಲ್ ಮತ್ತು ಕೆಎಂಸಿ ಆಸ್ಪತ್ರೆ ಸಹಯೋಗದಲ್ಲಿ ಕಾಲೇಜಿನ ಯೂತ್ ರೆಡ್ ಕ್ರಾಸ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯೊಂದಿಗೆ ರಕ್ತದಾನ ಶಿಬಿರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಕಾಲೇಜಿನ ಶೈಕ್ಷಣಿಕ ಆಡಳಿತ ಸಲಹೆಗಾರ ಡಾ. ನಾರಾಯಣ್ ಕಾಯರ್ಕಟ್ಟೆ ಅವರು ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ದಾನಗಳ ಶ್ರೇಷ್ಠತೆಯನ್ನು ತಿಳಿಸಲಾಗಿದೆ. ಒಂದೊಂದು ಕಾಲದಲ್ಲಿ ಒಂದೊಂದು ದಾನಗಳು ಪ್ರಾಮುಖ್ಯತೆ ಪಡೆದಿವೆ. ಮೊದಲು ವಿದ್ಯಾದಾನ, ಕನ್ಯಾದಾನ ಹೀಗೆ..ಪ್ರಸ್ತುತ ಕಾಲಘಟ್ಟದಲ್ಲಿ ರಕ್ತದಾನ ಬಹಳ ಮಹತ್ವದ ಕಾರ್ಯವಾಗಿದೆ ಎಂದರು.
ಕಂಕನಾಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಎನ್. ನಾಗೇಶ್ ಉದ್ಘಾಟಿಸಿ ಮಾತನಾಡಿ, ರಕ್ತದಾನವನ್ನು ಏಕೆ ಮಾಡಬೇಕು, ರಕ್ತದಾನದಿಂದ ಆಗುವ ಪ್ರಯೋಜನಗಳೇನು, ರಕ್ತದ ವಿವಿಧ ಗುಂಪುಗಳು ಮೊದಲಾದವುಗಳ ಬಗ್ಗೆ ತಿಳಿಸಿದರು.
ಕಂಕನಾಡಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಆಶಾ ಚಂದ್ರಮೋಹನ್, ಲಯನ್ಸ್ ಕ್ಲಬ್ನ ಎಂ. ಶೇಖರ್ ಪೂಜಾರಿ, ವೆನಿ ಮರೋಳಿ, ಕೆಎಂಸಿ ಆಸ್ಪತ್ರೆಯ ವೈದ್ಯ ಶಿಶಿರ್ ದಾಸ್, ಕಾಲೇಜಿನ ಪ್ರಾಂಶುಪಾಲ ಪ್ರೊ. ಗಿರೀಶ್ ಮಾಡ್ಲ, ತ್ರಿಶಾ ಸಂಧ್ಯಾ ಕಾಲೇಜಿನ ಪ್ರೊ. ಸುಪ್ರಭಾ, ಕಾಲೇಜಿನ ಎನ್.ಎಸ್.ಎಸ್ ಘಟಕದ ಅಧಿಕಾರಿಗಳಾದ ಪ್ರೊ. ಚಂದನ್ ಕುಮಾರ್ ಸಿ. , ಪ್ರೊ. ಆಡ್ಲಿನ್ ಜೋತ್ಸ್ನ ಪಿಂಟೊ , ಯೂತ್ ರೆಡ್ ಕ್ರಾಸ್ ನ ಪ್ರೊ. .ಶಿಲ್ಪ ಶೆಟ್ಟಿ, ಪ್ರೊ. ನಮ್ರತಾ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ದೀಪ್ನಾ ಸ್ವಾಗತಿಸಿದರು. ಆಂಚಲ್ ವಂದಿಸಿದರು. ರಕ್ಷಾ ಪಿ.ಪಿ. ನಿರೂಪಿಸಿದರು. ಹಲವಾರು ವಿದ್ಯಾರ್ಥಿಗಳು ರಕ್ತದಾನ ಮಾಡಿದರು.