ಮಂಗಳೂರು, ನ 25 (DaijiworldNews/MS): ನಗರದ ನಾಗುರಿಯಲ್ಲಿ ನ. 19ರ ಶನಿವಾರ ಕುಕ್ಕರ್ ಬಾಂಬ್ ಸ್ಫೋಟಕ್ಕೆ ಮೊದಲು ಕರಾವಳಿಯಲ್ಲಿ ಸ್ಯಾಟಲೈಟ್ ಫೋನ್ಗಳು ರಿಂಗಣಿಸಿತ್ತು ಅಲ್ಲದೆ ಕರಾವಳಿಯ ದಟ್ಟಾರಣ್ಯ ಪ್ರದೇಶದಲ್ಲಿ ನಿಗೂಢ ಚಟುವಟಿಕೆಗಳು ನಡೆದಿರುವ ಬಗ್ಗೆ ಗುಪ್ತಚರ ಮೂಲಗಳು ದೃಢಪಡಿಸಿವೆ.
ಶನಿವಾರ ಸಂಜೆ ಸ್ಫೋಟ ನಡೆದಿದ್ದರೆ ಅದರ ಮುನ್ನಾ ದಿನವಾದ ನ.18ರಂದು ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯ ದಟ್ಟಾರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಸಕ್ರಿಯವಾಗಿದ್ದು ಕರೆಗಳು ಹೋಗಿವೆ.
ನ. 19ರಂದು ಬಂಟ್ವಾಳದ ಬಿ.ಸಿ. ರೋಡ್ಗೆ ಶಾರೀಕ್ ಬಂದಿದ್ದ ಎನ್ನುವ ಹಿನ್ನೆಲೆಯಲ್ಲಿ ಈ ಅಂಶವೀಗ ಮಹತ್ವ ಪಡೆದುಕೊಂಡಿದೆ. ಯಾರೋ ನಿಗೂಢ ವ್ಯಕ್ತಿಗಳು ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಸಾಧಿಸಿದ್ದುದು ಬೇಹುಗಾರಿಕೆ ಇಲಾಖೆಗೆ ಗೊತ್ತಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಎರಡು, ಉಡುಪಿ ಒಂದು ಕಡೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶದಿಂದ ಸ್ಯಾಟಲೈಟ್ ಫೋನ್ ಮೂಲಕ ಕರೆ ಹೋಗಿದೆ.ಈ ಹಿನ್ನೆಲೆಯಲ್ಲಿ ಸ್ಯಾಟಲೈಟ್ ಫೋನ್ ಲೊಕೇಶನ್ ಆಧರಿಸಿ ಪೊಲೀಸರು ಹಾಗೂ ಎನ್ಐಎ ತನಿಖೆಗೆ ಮುಂದಾಗಿದ್ದಾರೆ.